ನವದೆಹಲಿ: ಹಿರಿಯ ಪತ್ರಕರ್ತ ವಿನೋದ್ ದುವಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತಂದೆ ಸಾವನ್ನಪ್ಪಿದ ಬಗ್ಗೆ ಪುತ್ರಿ ಮಲ್ಲಿಕಾ ದುವಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ.
ಕೋವಿಡ್ ಸೋಂಕಿನ ನಂತರ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 67 ವರ್ಷದ ಪತ್ರಕರ್ತ ದುವಾ ಅವರನ್ನು ಕಳೆದ ವಾರ ತೀವ್ರ ನಿಗಾ ಘಟಕಕ್ಕೆ ಶಿಪ್ಟ್ ಮಾಡಲಾಗಿತ್ತು.
ವಿನೋದ್ ದುವಾ ದೂರದರ್ಶನ ಮತ್ತು ಎನ್.ಡಿ.ಟಿ.ವಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವಿ ಪತ್ರಕರ್ತರಾಗಿದ್ದರು. 1996 ರಲ್ಲಿ, ಅವರು ಗೌರವಾನ್ವಿತ ರಾಮನಾಥ್ ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪಡೆದ ಮೊದಲ ಎಲೆಕ್ಟ್ರಾನಿಕ್ ಮಾಧ್ಯಮ ಪತ್ರಕರ್ತರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2008 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.
Comments are closed.