ಪ್ರಮುಖ ವರದಿಗಳು

ನಟಿ ಜಾಕ್ವೆಲಿನ್​ಗೆ 36 ಲಕ್ಷ ಬೆಲೆಯ ಬೆಕ್ಕನ್ನು ಗಿಫ್ಟ್​ ನೀಡಿದ್ದ ಬಹುಕೋಟಿ ವಂಚನೆ ಆರೋಪಿ ಸುಕೇಶ್

Pinterest LinkedIn Tumblr

ಮುಂಬಯಿ: ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಬಹುಕೋಟ್ಯಧಿಪತಿ ವಂಚಕ ಸುಕೇಶ್ ಚಂದ್ರಶೇಖರ್’ನಿಂದ 10 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಉಡುಗೊರೆಗಳಲ್ಲಿ 52 ಲಕ್ಷ ರೂಪಾಯಿಯ ಕುದುರೆ ಮತ್ತು ತಲಾ 9 ಲಕ್ಷ ಬೆಲೆಯ ನಾಲ್ಕು ಪರ್ಷಿಯನ್ ಬೆಕ್ಕುಗಳು ಉಡುಗೊರೆಯಲ್ಲಿ ಸೇರಿವೆ.

ಜಾರಿ ನಿರ್ದೇಶನಾಲಯ (ಇಡಿ) ಸುಕೇಶ್, ಪತ್ನಿ ನಟಿ ಲೀನಾ ಮರಿಯಾ ಪಾಲ್ ಮತ್ತು ಇತರ ಆರು ಜನರ ವಿರುದ್ಧ 200 ಕೋಟಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ.

ಈ ಹಿಂದೆ ಪ್ರಕರಣದಲ್ಲಿ ನಟಿಯರಾದ ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ನೋರಾ ಫತೇಹಿ ಸಾಕ್ಷಿಗಳಾಗಿ ಇಡಿಯಿಂದ ಸಮನ್ಸ್ ಪಡೆದಿದ್ದರು. ಚಾರ್ಜ್ ಶೀಟ್ ಪ್ರಕಾರ, ಸುಕೇಶ್ ಮತ್ತು ಜಾಕ್ವೆಲಿನ್ ಜನವರಿ 2021 ರಿಂದ ಪರಸ್ಪರ ಮಾತನಾಡುತ್ತಿದ್ದು, ಸುಕೇಶ್ ಜೈಲಿನಲ್ಲಿದ್ದಾಗಲೂ ತಮ್ಮ ಮೊಬೈಲ್ ಫೋನ್‌ನಲ್ಲಿ ಜಾಕ್ವೆಲಿನ್‌ನೊಂದಿಗೆ ಮಾತನಾಡುತ್ತಿದ್ದರು ”ಎಂದು ಇಂಡಿಯಾ ಟುಡೇ ವರದಿ ಹೇಳಿದೆ. ನಟಿಯ ಒಡಹುಟ್ಟಿದವರಿಗೂ ಹಣವನ್ನು ಕಳುಹಿಸಿದ್ದಾನೆ ಎಂದು ಹೇಳಿಕೊಂಡಿದೆ.

ನೋರಾ ಫತೇಹಿ ಪಡೆದ ಉಡುಗೊರೆಗಳ ಮೇಲೆ ಬೆಳಕು ಚೆಲ್ಲಿದ ಇಂಡಿಯಾ ಟುಡೇ ಪಡೆದ ಚಾರ್ಜ್ ಶೀಟ್, ‘ನೋರಾ ಫತೇಹಿಗೆ ಸುಕೇಶ್ ಅವರು 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಐಷಾರಾಮಿ ಬಿ.ಎಂ.ಡಬ್ಲ್ಯೂ ಕಾರು ಮತ್ತು ಐಫೋನ್ ಉಡುಗೊರೆಯಾಗಿ ನೀಡಿದ್ದಾರೆ’ ಎಂದು ಹೇಳಿದೆ.

ಕೆಲ ಸಮಯದ ಹಿಂದೆ ಜಾಕ್ವೆಲಿನ್ ಅವರು ಸುಕೇಶ್ ಕೆನ್ನೆಗೆ ಮುತ್ತಿಟ್ಟ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಇಬ್ಬರೂ ಅನ್ಯೋನ್ಯತೆಯಲ್ಲಿದ್ದಾರೆಂದು ಭಾರಿ ಸುದ್ದಿಯಾಗಿತ್ತು.

ಕೈಗಾರಿಕೋದ್ಯಮಿಯೊಬ್ಬರ ಪತ್ನಿಯಿಂದ ಸುಮಾರು 200 ಕೋಟಿ ಸುಲಿಗೆ ಮಾಡಿ ಹವಾಲಾ ಖಾತೆಯ ಮೂಲಕ ಹಣವನ್ನು ಲಾಂಡರಿಂಗ್ ಮಾಡಿ ಮತ್ತು ಅದನ್ನು ಕ್ರಿಪ್ಟೋಕರೆನ್ಸಿ ಖರೀದಿಸಲು ಬಳಸಿದ ಆರೋಪ ಸುಕೇಶ್ ಮೇಲಿದೆ.

 

Comments are closed.