ಕುಂದಾಪುರ: ಮೃತಪಟ್ಟ ಗಂಡು ಕಡವೆಯ ಕಳೇಬರ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಬಳಿ ಪತ್ತೆಯಾಗಿದೆ.
ಹೆದ್ದಾರಿ ಸಮೀಪದಲ್ಲಿ ಕೊಳೆತ ಸ್ಥಿತಿಯಲ್ಲಿ ಗಂಡು ಕಡವೆ ಶವ ಪತ್ತೆಯಾಗಿದ್ದು ಅನುಮಾಸ್ಪದ ಸ್ಥಿತಿಯಲ್ಲಿ ಕಡವೆ ಶವ ಕಂಡು ಬಂದಿದೆ. ಪೂರ್ಣ ವಿವರ ವೈದ್ಯಕೀಯ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಯಬೇಕಾಗಿದೆ. ಬೈಂದೂರು ವಲಯ ಅರಣ್ಯಾಧಿಕಾರಿ ಕಿರಣ್ ಬಾಬು ಅವರ ಸಮಕ್ಷಮದಲ್ಲಿ ಮಹಜರು ಕಾರ್ಯ ನಡೆದಿದ್ದು ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬೈಂದೂರು ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.