ಕರ್ನಾಟಕ

ನೇಣು ಬಿಗಿದ ಸ್ಥಿತಿಯಲ್ಲಿ ಬಸವಲಿಂಗ ಸ್ವಾಮೀಜಿ ಮೃತದೇಹ ಪತ್ತೆ

Pinterest LinkedIn Tumblr

ರಾಮನಗರ: ಜಿಲ್ಲೆಯ ಮಾಗಡಿ ತಾಲೂಕು ಸೋಲೂರು ಹೋಬಳಿಯ ಚಿಲುಮೆ ಮಠದ ಸ್ವಾಮೀಜಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೋಮವಾರ ಬೆಳಿಗ್ಗೆ ಬಸವಲಿಂಗ ಸ್ವಾಮೀಜಿ ಅವರ ದೇಹ ಮಠದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಭಾನುವಾರ ರಾತ್ರಿ‌ ಮಠಕ್ಕೆ ಹಿಂದಿರುಗಿದ್ದ ಸ್ವಾಮೀಜಿಯವರು ಸೋಮವಾರ ಬೆಳಿಗ್ಗೆ ಧನುರ್ಮಾಸ ಪೂಜೆ ಹಾಗೂ ಗದ್ದುಗೆ ಪೂಜೆಯನ್ನೂ ನೆರವೇರಿಸಿದ್ದರು. ಬಳಿಕ ಮಠದ ಕಿಟಕಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ರಾಮನಗರ ಎಸ್ಪಿ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Comments are closed.