ಕರ್ನಾಟಕ

ಬಹಿರಂಗ ಪಾರ್ಟಿ, ಇವೆಂಟ್ ಮಾಡುವ ಹಾಗಿಲ್ಲ: ಹೊಸವರ್ಷಾಚರಣೆಗೆ ಸರಕಾರದಿಂದ ಮಾರ್ಗಸೂಚಿ

Pinterest LinkedIn Tumblr

ಬೆಳಗಾವಿ: ಕೋವಿಡ್‌-19 ನಿಯಂತ್ರಣದ ಹಿನ್ನೆಲೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಹೊಸ ವರ್ಷಾಚರಣೆಗೆ ಅನ್ವಯವಾಗುವಂತೆ ಡಿಸೆಂಬರ್ 30 ರಿಂದ ಜನವರಿ 2 ತನಕ ಕೆಲವು ನಿರ್ಬಂಧಗಳನ್ನು ವಿಧಿಸಿದ್ದು ಹೊಸ ಮಾರ್ಗಸೂಚಿಗಳನ್ನು ಮಂಗಳವಾರ ಬಿಡುಗಡೆ ಮಾಡಿದೆ.

(ಸಾಂದರ್ಭಿಕ ಚಿತ್ರ)

ಇಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹೊಸ ವರ್ಷಾಚರಣೆಗೆ ಬಹಿರಂಗ ಸಂತೋಷ (ಬಹಿರಂಗ ಇವೆಂಟ್) ಕೂಟಗಳನ್ನು ಆಯೋಜಿಸುವುದನ್ನು ನಿಷೇಧಿಸಲಾಗಿದೆ ಎಂದರು.

ಕೋವಿಡ್ ಹಾಗೂ ಓಮಿಕ್ರಾನ್ ಪ್ರಸರಣ ತಡೆಯುವ ವಿಚಾರ ಗಮನದಲ್ಲಿಟ್ಟುಕೊಂಡು ಹೊಸವರ್ಷಾಚರಣೆಗೆ ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ ಸಿಎಂ, ಹೊಸ ವರ್ಷಾಚರಣೆ ವೇಳೆ ಜನ ಗುಂಪುಗೂಡದಂತೆ ನಿರ್ಬಂಧ ವಿಧಿಸಲಾಗಿದೆ. ಆದರೆ ಚರ್ಚ್ ಗಳಲ್ಲಿ ಕ್ರಿಸ್ ಮಸ್ ಪ್ರಾರ್ಥನೆಗೆ ಯಾವುದೇ ನಿರ್ಬಂಧವಿಲ್ಲ ಎಂದರು.

ಬಹಿರಂಗ ಪಾರ್ಟಿಗೆ ಅವಕಾಶವಿರುವುದಿಲ್ಲ. ಡಿಸೆಂಬರ್ 30 ರಿಂದ ಜನವರಿ 2ರ ವರೆಗೂ ನಿಷೇದಾಜ್ಞೆ ಜಾರಿಯಲ್ಲಿರುತ್ತದೆ. ಯಾವುದೇ ಪಾರ್ಟಿಗಳನ್ನ ಮಾಡುವಂತಿಲ್ಲ. ಅಪಾರ್ಟ್ಮೆಂಟ್ ಗಳಲ್ಲಿ ಜನರನ್ನ ಸೇರಿಸಿ ಪಾರ್ಟಿ ಮಾಡುವಂತಿಲ್ಲ. ಬಾರ್‌ ಅಂಡ್‌ ರೆಸ್ಟೋರೆಂಟ್‌ ಸಿಬ್ಬಂದಿಗೆ ಎರಡು ಡೋಸ್ ವ್ಯಾಕ್ಸಿನೇಷನ್ ಕಡ್ಡಾಯ. ದೊಡ್ಡ ಮಟ್ಟದಲ್ಲಿ ಪಾರ್ಟಿ ಆಯೋಜನೆ ಮಾಡುವಂತಿಲ್ಲ. ಕೋವಿಡ್ ನಿಯಮ ಪಾಲನೆ ಕಡ್ಡಾಯ ಎಂದರು.

Comments are closed.