ಮಂಗಳೂರು: ವೇಗಸ್ ಫಿಲಮ್ಸ್ ಲಾಂಛನದಲ್ಲಿ ತಯಾರಾದ ರಾಮ್ ಶೆಟ್ಟಿ ನಿರ್ದೇಶನದ ರೋಶನ್ ವೇಗಸ್ ನಿರ್ಮಾಣದ ‘ಏರೆಗಾವುಯೆ ಕಿರಿಕಿರಿ’ ತುಳು ಸಿನಿಮಾದ ಬಿಡುಗಡೆ ಸಮಾರಂಭ ಮಂಗಳೂರಿನ ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ನಡೆಯಿತು.
ಸೀಮಿತ ಮಾರುಕಟ್ಟೆಯ ತುಳು ಸಿನಿಮಾರಂಗಕ್ಕೆ ಈಗ ಥಿಯೇಟರ್‌ನದ್ದೇ ಕೊರತೆ. ತುಳು ಸಿನಿಮಾಗಳಿಗೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶ ದೊರೆಯುವಂತಾಗಬೇಕು. ತುಳು ಸಿನಿಮಾರಂಗದಲ್ಲಿ ಬೆನ್ನು ಬೆನ್ನಿಗೆ ಸಿನಿಮಾ ಬಿಡುಗಡೆಗೊಂಡರೆ ಅದು ತುಳುಸಿನಿಮಾ ರಂಗಕ್ಕೆ ಮತ್ತು ಪ್ರೇಕ್ಷಕರಿಗೆ ನಷ್ಟ, ಹೀಗಾಗಿ ಒಂದು ಸಿನಿಮಾ ಬಿಡುಗಡೆಗೊಂಡು ಕನಿಷ್ಠ ಮೂರು ವಾರಗಳ ಕಾಲ ಅಂತರ ಇರಬೇಕು ಎಂದು ಅಥಿತಿಗಳು ಹೇಳಿದರು.
ನಿರ್ದೇಶಕ ರಾಮ್ ಶೆಟ್ಟಿ ಮಾತನಾಡಿ, ಪ್ರೇಕ್ಷಕರ ನಾಡಿ ಮಿಡಿತವನ್ನು ಅರಿತು ಉತ್ತಮ ಹಾಸ್ಯ, ಕತೆಯನ್ನೊಳಗೊಂಡ ಏರೆಗಾವುಯೆ ಕಿರಿಕಿರಿ ಸಿನಿಮಾವನ್ನು ತಯಾರಿಸಲಾಗಿದೆ. ಸಿನಿಮಾವನ್ನು ಪ್ರೇಕ್ಷಕರು ನೋಡಿ ಪ್ರೋತ್ಸಾಹಿಸಬೇಕೆಂದರು.
ನಿರ್ಮಾಪಕ ರೋಶನ್ ವೇಗಸ್ ಮಾತನಾಡಿ, ಕಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ವಿಳಂಬವಾಯಿತು. ಪ್ರೇಕ್ಷಕರು ಕೈ ಹಿಡಿಯುತ್ತಾರೆಂಬ ನಂಬಿಕೆ ಇದೆ. ಸಿನಿಮಾ ಚೆನ್ನಾಗಿದೆ ಪ್ರೇಕ್ಷಕರು ನೋಡಿ ನಮ್ಮನ್ನು ಹರಸಬೇಕಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಉದ್ಯಮಿ ಜಯರಾಮ ಶೇಖ, ಪ್ರಮುಖರಾದ ತಮ್ಮ ಲಕ್ಷ್ಮಣ, ಸರೋಜಿನಿ ಶೆಟ್ಟಿ, ನಟಿ ಐಶ್ವರ್ಯ ಹೆಗ್ಡೆ, ನಟ ಮೊಹಮ್ಮದ್ ನಯೀಮ್, ಸಾಯಿ ಕೃಷ್ಣ, ಸಂದೀಪ್ ಶೆಟ್ಟಿ ಮಾಣಿಬೆಟ್ಟು ನಿರ್ಮಾಪಕ ರೋಶನ್ ವೇಗಸ್, ಜಗಾನ್ನಾಥ ಶೆಟ್ಟಿ ಬಾಳ, ವಿತರಕ ಬಾಲಕೃಷ್ಣ ಶೆಟ್ಟಿ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.
ಏರೆಗಾವುಯೇ ಕಿರಿಕಿರಿ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲೀಸ್, ಸುರತ್ಕಲ್‌ನಲ್ಲಿ ನಟರಾಜ್, ಉಡುಪಿಯಲ್ಲಿ ಕಲ್ಪನಾ, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಐನಾಕ್ಸ್ ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್ ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ, ಮೂಡುಬಿದ್ರೆಯಲ್ಲಿ ಅಮರಶ್ರೀ ಟಾಕೀಸ್‌ಗಳಲ್ಲಿ ಬಿಡುಗಡೆಗೊಂಡಿದೆ.
ಏರೆಗಾವುಯೇ ಕಿರಿಕಿರಿ ಹಾಸ್ಯಮಯ ಸನ್ನಿವೇಶಗಳೊಂದಿಗೆ ಯಾರದೋ ತಪ್ಪಿಗೆ ಇನ್ಯಾರೋ ಕಿರಿಕಿರಿ ಅನುಭವಿಸುವುದು, ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಸತ್ಯದ ದಾರಿಯಲ್ಲಿ ಬಾಳುವುದೇ ಜೀವನ ಎಂಬ ಸಂದೇಶ ಈ ಚಿತ್ರದಲ್ಲಿದೆ.
Comments are closed.