ಕುಂದಾಪುರ: ಚುನಾವಣೆಯ ಪೂರ್ವದಲ್ಲಿ ಕಬ್ಬಿನಾಲೆ ಭಾಗಕ್ಕೆ ಭೇಟಿ ಕೊಟ್ಟಾಗ, ಹಲವಷ್ಟು ವರ್ಷಗಳಿಂದ ಈ ಊರಿನ ಜನರು ಅನುಭವಿಸುತ್ತಿದ್ದ ಸಂಕಷ್ಟ ಗಮನಕ್ಕೆ ಬಂತು. ಇಲ್ಲೊಂದು ಸೇತುವೆ ನಿರ್ಮಾಣ ಮಾಡಿದರೆ ಊರಿಗೊಂದು ಸಂಪರ್ಕ ಆಗುತ್ತದೆ, ಪ್ರತಿನಿತ್ಯ ಜನರು ಅನುಭವಿಸುವ ಬವಣೆ ದೂರವಾಗುತ್ತದೆ ಎಂಬ ದೃಷ್ಟಿಯಿಂದ ಅವರೆಲ್ಲರೂ ಸೇತುವೆಗಾಗಿ ಬೇಡಿಕೆ ಇಟ್ಟಿದ್ದರು ಚುನಾವಣೆಯಲ್ಲಿ ಗೆದ್ದ ನಂತರ ಕೊಟ್ಟ ಆಶ್ವಾಸನೆಯನ್ನು ಮರೆತು ಬಿಡುವ ಜಾಯಮಾನ ನಮ್ಮದಲ್ಲ. ಪ್ರತಿ ಊರಿನ ಅಗತ್ಯತೆಗಳಿಗೆ ಸ್ಪಂದಿಸಿ, ಈಡೇರಿಸುವುದು ನಮ್ಮ ಆದ್ಯತೆ. ಆ ನಿಟ್ಟಿನಲ್ಲಿ ಕಬ್ಬಿನಾಲೆ ಕಟ್ಟಿನಾಡಿಗೆ ಸಂಪರ್ಕಿಸುವ ಸೇತುವೆಗೆ ಅನುದಾನ ಮಂಜೂರು ಮಾಡಲಾಗಿದೆ ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಬೈಂದೂರು ಕುಗ್ರಾಮ ಎನಿಸಿಕೊಳ್ಳಬಾರದು, ಬಿಗ್‌ಗ್ರಾಮ ಎನಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಬೈಂದೂರು ಕ್ಷೇತ್ರದ ಜನರಿಗೆ ಪ್ರಥಮ ಆದ್ಯತೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಪರಮ ಗುರಿ ಎಂದ ಅವರು ಕಾಮಗಾರಿ ನಡೆಸುವ ಸ್ಥಳದ ವೀಕ್ಷಣೆಯನ್ನು ನಡೆಸಲಾಗಿದೆ. ಈ ಸೇತುವೆ ನಿರ್ಮಾಣದಿಂದ ನೂರಾರು ಮನೆಯವರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ಸಂತೃಪ್ತಿಯಿದೆ. ನಮ್ಮ ಮನವಿಯನ್ನು ಪುರಸ್ಕರಿಸಿ ಅನುದಾನವನ್ನು ಒದಗಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರಿಗೆ ಅಭಿಂದನೆಯನ್ನು ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಮಾಜಿ ತಾ.ಪಂ ಸದಸ್ಯ ಉಮೇಶ್ ಕಲ್ಲ್ಗದ್ದೆ, ಹಳ್ಳಿಹೊಳೆ ಗ್ರಾ.ಪಂ ಅಧ್ಯಕ್ಷ ಪ್ರದೀಪ್ ಕೊಟ್ಟಾರಿ, ಸದಸ್ಯ ಮಂಜುನಾಥ ಶೆಟ್ಟಿ, ಉಳ್ಳೂರು74 ಗ್ರಾ.ಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ಮೊದಲಾದವರು ಇದ್ದರು.
Comments are closed.