ಕರ್ನಾಟಕ

ರಾಕಿಂಗ್ ಸ್ಟಾರ್ ಯಶ್’ಗೆ ಜನ್ಮದಿನದ ಸಂಭ್ರಮ: ಕೆಜಿಎಫ್‌ 2 ಮತ್ತೊಂದು ಪೋಸ್ಟರ್‌ ಬಿಡುಗಡೆ ಮಾಡಿದ ಚಿತ್ರತಂಡ

Pinterest LinkedIn Tumblr

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಅಂಗವಾಗಿ ಕೆಜಿಎಫ್ ಚಿತ್ರ ತಂಡ ನೂತನ ಪೋಸ್ಟರ್ ಬಿಡುಗಡೆ ಮಾಡಿದ್ದು, ಈ ಪೋಸ್ಟರ್‌ನಲ್ಲಿ ಕೆಜಿಎಫ್ ಚಿತ್ರದಲ್ಲಿನ ಯಶ್ ಡೆಡ್ಲಿ ಲುಕ್ ಪರಿಚಯಿಸಲಾಗಿದೆ.

ಯಶ್‌ ಅವರ ಕೆಜಿಎಫ್‌ 2 ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದ್ದು, ಯಶ್‌ ಜನ್ಮದಿನವಾದ ಇಂದೇ (ಜ.8) ಪೋಸ್ಟರ್‌ ಬಿಡುಗಡೆಯಾಗಿರುವುದಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಹೊಂಬಾಳೆ ಸಂಸ್ಥೆ ಹಾಗೂ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಹೊಸ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಎಚ್ಚರ ಮುಂದೆ ಅಪಾಯವಿದೆ ಎಂಬ ಬರಹ ಪೋಸ್ಟರ್ ನಲ್ಲಿದ್ದು, ಹ್ಯಾಪಿ ಬರ್ತ್ ಡೇ ಮೈ ರಾಕಿ ಬಾಯ್ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಬರೆದುಕೊಂಡಿದ್ದಾರೆ.

ಬಹು ನಿರೀಕ್ಷಿತ ಚಿತ್ರಗಳ ಸಾಲಿನಲ್ಲಿರುವ ಕೆಜಿಎಫ್‌ 2 ಚಿತ್ರ ಏಪ್ರಿಲ್‌ 14ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

Comments are closed.