ಕರಾವಳಿ

ಶ್ರೀ ಕೃಷ್ಣಮಠಕ್ಕೆ ಬಂದ ಕುಂದಾಪುರದ ಮಹಿಳೆಯ ಪರ್ಸ್ ಕಳವು ಮಾಡಿದ ಐವರು ಅಂತರ್ ರಾಜ್ಯ ಕಳ್ಳರ ಬಂಧನ

Pinterest LinkedIn Tumblr

ಉಡುಪಿ: ಪರ್ಯಾಯ ಮಹೋತ್ಸವದ ವೇಳೆ ಕಳ್ಳತನಕ್ಕೆ ಆಗಮಿಸಿದ್ದ ಐವರನ್ನು ಬಂಧಿಸಿರುವ ಉಡುಪಿ ಪೊಲೀಸರು ಮುಂದೆ ನಡೆಯಬಹುದಾದ ಕಳ್ಳತನ, ಸುಲಿಗೆಯನ್ನು ತಪ್ಪಿಸಿದ್ದಾರೆ.

ಕುಂದಾಪುರ ಮೂಲದ 54 ವರ್ಷ ಪ್ರಾಯದ ಮಹಿಳೆಯೊಬ್ಬರು ಸಂಕ್ರಾಂತಿ ಪ್ರಯುಕ್ತ ಉಡುಪಿ ಕೃಷ್ಣಮಠಕ್ಕೆ ಬಂದಿದ್ದರು.ಈ ಸಂದರ್ಭ 3 ಜನ ಮಹಿಳೆಯರು ಹಾಗೂ ಇಬ್ಬರು ಗಂಡಸರು ಸೇರಿ ಲಕ್ಷ್ಮಿಯವರ ಬಟ್ಟೆಯ ಕೈ ಚೀಲದ ಒಂದು ಬದಿಯನ್ನು ಹರಿತವಾದ ಆಯುಧದಿಂದ ಹರಿದು ಚೀಲದಲ್ಲಿದ್ದ ಸಣ್ಣ ಪರ್ಸ್‌ನ್ನು ಕಳವು ಮಾಡಿದ್ದು, ಪರ್ಸ್‌ನಲ್ಲಿ 10,000 ನಗದು ಮನೆಯ ಬೀಗ ಹಾಗೂ ಕೆಲವು ಬಿಲ್‌ಗಳು ಕಳವಾಗಿದ್ದವು.ಈ ಸಂಬಂಧ ಲಕ್ಷ್ಮೀ ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಉಡುಪಿ ಪೊಲೀಸರು, ಕೃಷ್ಣಮಠದ ರಥಬೀದಿಯಲ್ಲಿರುವ ಸಿಸಿ ಕ್ಯಾಮರಾಗಳ ಫೂಟೇಜ್ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಮ್ಮಿ ಶೆಟ್ಟಿ ಮಣಿ, ಪ್ರಿಯಾಂಕ ಕಾಕಣಿ, ಇಟ್ಟಾ ಜಾನ್ಸಿ ,ಇಟ್ಟಾ ಸಾಗರ, ಮತ್ತು ಹರಿಬಾಬು ಬಂಧಿತ ಆರೋಪಿಗಳು.ಇವರೆಲ್ಲ ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ವಾಸಿಗಳಾಗಿದ್ದಾರೆ. ಇವರೆಲ್ಲರೂ ಕಳ್ಳತನದ ಪೃವೃತ್ತಿವುಳ್ಳ ನಟೋರಿಯಸ್’ಗಳಾಗಿದ್ದು ಪರ್ಯಾಯ ಉತ್ಸವದಲ್ಲಿ ಸಾರ್ವಜನಿಕರಿಂದ ಪಿಕ್ ಪಾಕೆಟ್ ಮತ್ತು ಸುಲಿಗೆ ನಡೆಸಲೆಂದೇ ಆಗಮಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉಡುಪಿ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ಆದೇಶದಂತೆ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಸುಧಾಕರ ಸದಾನಂದ ನಾಯ್ಕ ಮಾರ್ಗದರ್ಶನದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ, ಪೊಲೀಸ್ ಉಪ-ನಿರೀಕ್ಷಕ ವಾಸಪ್ಪ ನಾಯ್ಕ, ಪ್ರೊಬೇಷನರಿ ಪಿ.ಎಸ್.ಐ. ಪ್ರಸಾದ ಸುಹಾಸ್, ಎಎಸ್‌ಐ ವಿಜಯ್, ಸಿಬ್ಬಂದಿಗಳಾರದ ಜೀವನ್ ಕುಮಾರ್, ಸತೀಶ್, ಲೋಕೇಶ್, ಆಶಾಲತಾ, ಬಾಲಕೃಷಣ, ರಿಯಾಜ್ ಅಹ್ಮದ್ ಚೇತನ್, ಕಿರಣ್ ಸಂತೋಷ್ ರಾಠೋಡ್, ಸುಷ್ಮಾ, ರೂಪ, ಕಾರ್ತಿಕ್, ಗಂಗಾಧರಪ್ಪ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.