ಕರಾವಳಿ

ಕುಂದಾಪುರ ಜೂನಿಯರ್ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ‌ ಪ್ರವೇಶವಿಲ್ಲ; ಪ್ರತ್ಯೇಕ ಕೊಠಡಿ ವ್ಯವಸ್ಥೆ..!

Pinterest LinkedIn Tumblr

ಕುಂದಾಪುರ: ಉಡುಪಿ ಬಳಿಕ ಕುಂದಾಪುರದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹಿಜಾಬ್ ವಿವಾದ ಸೋಮವಾರವೂ ಮುಂದುವರಿದಿದ್ದು, ಕುಂದಾಪುರ ಸರ್ಕಾರಿ ಪಿಯು ಕಾಲೇಜು (ಜೂನಿಯರ್ ಕಾಲೇಜು) ವಿದ್ಯಾರ್ಥಿನಿಯರು ಫೆ.7 ರಂದು ಹಿಜಾಬ್ ಧರಿಸಿ ಬಂದಿದ್ದರು.

ರಾಜ್ಯ ಸರಕಾರ ಕಾಲೇಜು ಆವರಣದೊಳಕ್ಕೆ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳ ಹೊರತಾಗಿ ಇತರರಿಗೆ ಪ್ರವೇಶವಿಲ್ಲ ಎಂಬ ಆದೇಶ ಹೊರಡಿಸಿದ್ದರಿಂದ ಪ್ರಾಂಶುಪಾಲರು ಮನವೊಲಿಸುವ ಪ್ರಯತ್ನ ಮಾಡಿದರಾದರೂ ವಿದ್ಯಾರ್ಥಿನಿಯರು ಒಪ್ಪದ ಕಾರಣ ಅವರಿಗೆ ಕಾಲೇಜು ಆವರಣದೊಳಕ್ಕೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಯಿತು.

ವಿದ್ಯಾರ್ಥಿನಿಯರ ಆಗಮನಕ್ಕೂ ಮೊದಲು ಕಾಲೇಜು ಆವರಣ ಗೋಡೆಗೆ ಸರಕಾರದ ಆದೇಶ ಪ್ರತಿ‌ ಅಂಟಿಸಲಾಯಿತು. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಮಾನ‌ ಮುಚ್ಚಲು ಸಹಕಾರಿ. ನಮಗೆ ಹಿಜಾಬ್ ಮುಖ್ಯ, ಶಿಕ್ಷಣವೂ ಕೂಡ ಮುಖ್ಯ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದರು.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ‌ ಸಿಪಿಐ ಗೋಪಿಕೃಷ್ಣ, ಪಿಎಸ್ಐಗಳಾದ ಸದಾಶಿವ ಗವರೋಜಿ, ಸುಬ್ಬಣ್ಣ, ಸುಧಾಪ್ರಭು ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಬೀಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ನಡೆಯುತ್ತಿರುವ ಕಾಲೇಜುಗಳು ಎದುರು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

Comments are closed.