ಕುಂದಾಪುರ: ರಾಜ್ಯ ಸರಕಾರವು ಸಮವಸ್ತ್ರ ಕಡ್ಡಾಯ ಮಾಡಿ ಸುತ್ತೋಲೆ ಹೊರಡಿಸಿದ್ದರೂ ಕುಂದಾಪುರದ ಕಾಲೇಜುಗಳಲ್ಲಿ ಈ ಬಗ್ಗೆ ಗೊಂದಲ ಇನ್ನೂ ಕೂಡ ಮುಂದುವರಿದಿದೆ. ಫೆ.7 ಸೋಮವಾರ ಬೆಳಗ್ಗೆ ಕುಂದಾಪುರದ ವೆಂಕಟರಮಣ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಜೈಶ್ರೀರಾಮ್ ಘೋಷಣೆ ಕೂಗುತ್ತಾ ಕಾಲೇಜಿಗೆ ಆಗಮಿಸಿದ್ದಾರೆ.
ವೆಂಕಟರಮಣ ಪಿಯು ಕಾಲೇಜಿನ ಕೆಲ ವಿದ್ಯಾರ್ಥಿಗಳು ಇಂದು ಬೆಳಗ್ಗೆ ಕೇಸರಿ ಶಾಲು ಧರಿಸಿಕೊಂಡು ಕುಂದಾಪುರದಿಂದ ಕಾಲೇಜ್ ತನಕ ಜೈಶ್ರೀರಾಮ್ ಘೋಷಣೆ ಕೂಗುತ್ತಾ ಕಾಲೇಜಿಗೆ ಆಗಮಿಸಿದರು. ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆ ನಾವು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತೇವೆ ಎಂದು ಆಗ್ರಹಿಸಿದರು. ಕಾಲೇಜಿನ ಗೇಟ್ ಬಳಿ ವಿದ್ಯಾರ್ಥಿಗಳನ್ನು ತಡೆದ ಪ್ರಾಂಶುಪಾಲರು, ಬೇರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಅಡ್ಡಿಯುಂಟು ಮಾಡದಂತೆ ಸೂಚನೆ ನೀಡಿದರು. ಕೇಸರಿ ಶಾಲುಗಳನ್ನು ತೆಗೆದಿರಿಸಿ ಬಳಿಕ ತರಗತಿ ಪ್ರವೇಶಕ್ಕೆ ಅನುಮತಿ ನೀಡಿದರು.
ಅದರಂತೆ ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆದು ತರಗತಿಗಳಿಗೆ ತೆರಳಿದರು. ಸರಕಾರಿ ಕಾಲೇಜಿನಿಂದ ಆರಂಭಗೊಂಡ ಕೇಸರಿ ಶಾಲು ಹಾಗೂ ಹಿಜಾಬ್ ವಿವಾದವು ಕುಂದಾಪುರದಲ್ಲಿ ದಿನಕ್ಕೊಂದು ಖಾಸಗಿ ಕಾಲೇಜಿನಲ್ಲಿ ವಿವಾದಗಳು ಸೃಷ್ಟಿಯಾಗುತ್ತಿದೆ.
Comments are closed.