ಉಡುಪಿ: ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ವಿಚಾರದಲ್ಲಿ ಮತ್ತೆ ಗೊಂದಲ ಉಂಟಾಗಿದೆ. ಇಂದು ಹಿಜಾಬ್ ಧರಿಸಿದ ಸ್ನಾತಕೋತ್ತರ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶಕ್ಕೆ ಅವಕಾಶ ಕೇಳಿದ್ದು, ಅವರನ್ನು ಪ್ರಾಂಶುಪಾಲರು ಗೇಟಿನಿಂದ ಹೊರಗೆ ಕಳುಹಿಸಿರುವ ಘಟನೆ ನಡೆದಿದೆ.
ಮಾಧ್ಯಮಗಳು ನಮ್ಮನ್ನ ತಪ್ಪಾಗಿ ಬಿಂಬಿಸುತ್ತಿದೆ. ನಮಗೆ ಶಿಕ್ಷಣ ಬೇಕು. ಆದಷ್ಟು ಬೇಗ ಕೋರ್ಟ್ ತೀರ್ಪು ಕೊಡಲಿ. ಎಂಜಿಎಂ ಕಾಲೇಜು ಸಿಡಿಸಿ ಅಡಿಯಲ್ಲಿ ಬರಲ್ಲ. ಹಿಜಾಬ್ ನೊಂದಿಗೆ ಶಿಕ್ಷಣ ಕಲಿಯಲು ಅವಕಾಶ ಕೊಡಿ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ನಮಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಈಗ ತರಗತಿ ಅಟೆಂಡ್ ಆಗಲು ಕೂಡ ಬಿಡುತ್ತಿಲ್ಲ. ನಮಗೆ ಕ್ಯಾಂಪಸ್ ಒಳಗೆ ನಿಲ್ಲಲು ಬಿಟ್ಟಿಲ್ಲ ಎಂದು ಸ್ನಾತಕೋತ್ತರ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.
ಎಂಜಿಎಂ ಕಾಲೇಜಿಗೆ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.
Comments are closed.