ಉಡುಪಿ: ಇಂದು ನಮಗೆ ಅಂತಿಮ ಪ್ರಾಕ್ಟಿಕಲ್ ಪರೀಕ್ಷೆ ಇದ್ದಿತ್ತು. ಆದರೆ ಹಿಜಬ್ ಕುರಿತಾದ ದ್ವೇಷದಿಂದ ನಮಗೆ ಪರೀಕ್ಷೆ ಬರೆಯಲು ಆಗಲಿಲ್ಲ ಎಂದು ಉಡುಪಿಯ ಹಿಜಬ್ ಹೋರಾಟಗಾರ್ತಿ ಅಲ್ಮಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ನಮಗೆ ಅಂತಿಮ ಪ್ರಾಕ್ಟಿಕಲ್ ಪರೀಕ್ಷೆ ಇತ್ತು. ನಾವು ವಿಜ್ಞಾನದ ರೆಕಾರ್ಡ್ ಬುಕ್ ಪೂರ್ಣಗೊಳಿಸಿದ್ದೇನೆ. ಅಪಾರ ನಿರೀಕ್ಷೆಯೊಂದಿಗೆ ನಾವು ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದೆವು. ನಮ್ಮ ಪ್ರಾಂಶುಪಾಲರು ನಮಗೆ ಪರೀಕ್ಷೆ ಬರೆಯುವ ಅವಕಾಶ ಕೊಡಲಿಲ್ಲ ಎಂದು ಕಿಡಿಕಾರಿದಳು.
ಪ್ರಾಂಶುಪಾಲರು 5 ನಿಮಿಷದಲ್ಲಿ ಜಾಗ ಖಾಲಿ ಮಾಡದಿದ್ದರೆ, ಪೊಲೀಸ್ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಂದುಕೊಂಡಂತೆ ನಡೆದಿದ್ದರೆ ನಾವು ಲ್ಯಾಬ್ ಪರೀಕ್ಷೆ ಬರೆದು ಮುಗಿಸಬೇಕಿತ್ತು. ಹಿಜಾಬ್ ಕುರಿತಾದ ದ್ವೇಷದಿಂದ ಈ ಪರಿಸ್ಥಿತಿ ನಮಗೆ ಬಂದೊದಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
Comments are closed.