ಕರಾವಳಿ

ಉಡುಪಿಯ ಸಂತೆಕಟ್ಟೆ ಬಳಿ ಭೀಕರ ಅಪಘಾತ; ಎಎಸ್ಐ ಹಾಗೂ ಮಗಳು ದಾರುಣ ಸಾವು

Pinterest LinkedIn Tumblr

ಉಡುಪಿ: ಸರಕಾರಿ ಬಸ್ – ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಹಾಗೂ ಮಗಳು ಸಾವನ್ನಪ್ಪಿದ ದಾರುಣ ಘಟನೆ ಸಂತೆಕಟ್ಟೆ ಬಳಿ ಮಾ.2 ಬುಧವಾರ ಮುಂಜಾನೆ ನಡೆದಿದೆ.

ಮೃತರನ್ನು ಗಣೇಶ್ ಪೈ (58) ಹಾಗೂ ಮಗಳು ಗಾಯತ್ರಿ ಪೈ (27) ಎಂದು ಗುರುತಿಸಲಾಗಿದೆ. ಗಣೇಶ್‌ ಪೈ ಕರಾವಳಿ ಕಾವಲು ಪಡೆಯಲ್ಲಿ ಎಎಸೈ ಆಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

ಹುಬ್ಬಳ್ಳಿಯಿಂದ ಬಸ್ ನಲ್ಲಿ ಆಗಮಿಸಿದ್ದ ಮಗಳನ್ನು ಕರೆದುಕೊಂಡು ಹೋಗಲು ತನ್ನ ಸ್ಕೂಟರ್ ನಲ್ಲಿ ಬಸ್ ನಿಲ್ದಾಣಕ್ಕೆ ತಂದೆ ಬಂದಿದ್ದರು. ಮಗಳ ಜೊತೆ ಸ್ಕೂಟರ್‌ನಲ್ಲಿ ಸಂತೆಕಟ್ಟೆ‌ ಜಂಕ್ಷನ್ ನಲ್ಲಿ ರಸ್ತೆ ದಾಟುತ್ತಿದ್ದಾಗ ಉಡುಪಿಯಿಂದ ಕೊಲ್ಲೂರು ಕಡೆ ತೆರಳುತ್ತಿದ್ದ ಕೇರಳ ರಸ್ತೆ‌ ಸಾರಿಗೆ ಸಂಸ್ಥೆಗೆ ಸೇರಿದ ಎಸಿ‌ ಬಸ್ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ತಂದೆ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.