ಶಿವಮೊಗ್ಗ: ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಮನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ರಾಜ್ಯ ಸರಕಾರದ ಪರವಾಗಿ ಹರ್ಷ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರದ ಚೆಕ್ ನೀಡಿದರು.
ಸೀಗೆಹಟ್ಟಿಯಲ್ಲಿ ಹರ್ಷ ಕುಟುಂಬಸ್ಥರ ಭೇಟಿ ಬಳಿಕ ಮಾತನಾಡಿದ ಯಡಿಯೂರಪ್ಪ, 26 ವರ್ಷದ ಯುವಕ ಹರ್ಷ ಎಲ್ಲರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ. ಈ ಭಾಗದಲ್ಲಿ ಗೊಂದಲ, ಹೋರಾಟಕ್ಕೆ ಅವಕಾಶ ನೀಡುತ್ತಾ ಇರಲಿಲ್ಲ. ಹಿಂದೂ ಯುವ ಮುಖಂಡನಾಗಿ ಹರ್ಷ ಬೆಳೆಯುತ್ತಿದ್ದ. ಇದನ್ನೂ ಸಹಿಸಲಾದೇ ಕೆಲವು ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ. ಇದು ಅತ್ಯಂತ ಅಮಾನುಷ ಕೃತ್ಯ ಎಂದು ಹೇಳಿದ್ದಾರೆ.
ಹರ್ಷನ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸರಕಾರದ ಕಡೆಯಿಂದ 25 ಲಕ್ಷ ರೂ. ಚೆಕ್ ಅನ್ನು ಅವರಿಗೆ ಕೊಟ್ಟಿದ್ದೇನೆ. ಹಣ ಮುಖ್ಯ ಅಲ್ಲ. ಹರ್ಷನನ್ನು ಕಳೆದುಕೊಂಡ ಕುಟುಂಬದ ನೋವು ದೊಡ್ಡದು. ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂಬ ಪ್ರಾರ್ಥನೆ ಮಾಡೋಣ ಎಂದು ತಿಳಿಸಿದರು.
Comments are closed.