ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕೊನೆಯ ಸಿನೆಮಾ ಜೇಮ್ಸ್ ಸೆನ್ಸಾರ್ ಪಾಸ್ ಆಗಿದ್ದು, ಸೆನ್ಸಾರ್ ಮಂಡಳಿಯು ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ ಎಂದು ತಿಳಿದುಬಂದಿದೆ.
ಜೇಮ್ಸ್ ಸಿನಿಮಾ ಇದೇ ಮಾರ್ಚ್ 17 ಕ್ಕೆ ರಿಲೀಸ್ ಆಗಲಿದೆ. ಮಾರ್ಚ್ 17 ರಿಂದ ಒಂದು ವಾರ ಕರ್ನಾಟಕದಲ್ಲಿ ಅಪ್ಪು ಜೇಮ್ಸ್ ಹಬ್ಬ ಆರಂಭವಾಗಲಿದೆ. ಜೇಮ್ಸ್ ಸಿನಿಮಾದಲ್ಲಿ ಪುನೀತ್ ಪಾತ್ರಕ್ಕೆ ಅವರ ಸಹೋದರ ಡಾ. ಶಿವರಾಜ್ಕುಮಾರ್ ಡಬ್ ಮಾಡಿದ್ದಾರೆ.
ಅಕ್ಟೋಬರ್ 29ರಂದು ಪುನೀತ್ ರಾಜ್ಕುಮಾರ್ ನಿಧನ ಹೊಂದಿದ್ದರು. ಅದಾಗಲೇ ಅವರು ‘ಜೇಮ್ಸ್’ ಸಿನಿಮಾ ಕೆಲಸಗಳನ್ನು ಬಹುತೇಕ ಪೂರ್ಣಗೊಳಿಸಿದ್ದರು. ಹಾಡಿನ ಶೂಟಿಂಗ್ ಮಾತ್ರ ಬಾಕಿ ಇತ್ತು. ಈಗ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಮಾರ್ಚ್ 17ರಂದು ತೆರೆಗೆ ಬರುತ್ತಿದೆ.
Comments are closed.