ಕರ್ನಾಟಕ

‘ನಮಗೆ ರಕ್ಷಣೆ ಬೇಕು’ ಎಂದು ಬೆಂಗಳೂರು ಪೊಲೀಸರ ಮೊರೆ ಹೋದ ತಮಿಳುನಾಡು ಮಂತ್ರಿ ಮಗಳು..!

Pinterest LinkedIn Tumblr

ಬೆಂಗಳೂರು: ತಮಿಳುನಾಡು ಸಚಿವರ ಪುತ್ರಿಯ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮದುವೆಯಾದ ಸಚಿವರ ಪುತ್ರಿ ಮತ್ತು ಆಕೆ ಪ್ರಿಯಕರ ಬೆಂಗಳೂರಿಗೆ ಆಗನಿಸಿದ್ದು ತಮಗೆ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ತಮಿಳುನಾಡು ಸರ್ಕಾರದ ಮುಜರಾಯಿ ಸಚಿವ ಶೇಖರ್ ಬಾಬು ಪುತ್ರಿ ಜಯಕಲ್ಯಾಣಿ ಅವರು ಸತೀಶ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದರು. ಈ ವಿಚಾರವಾಗಿ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ವಿರೋಧದ ನಡುವೆ ಜಯಕಲ್ಯಾಣಿ ತಮಿಳುನಾಡಿನಿಂದ ನಾಪತ್ತೆ ಆಗಿದ್ದರು. ನಾಪತ್ತೆಯಾದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಜಯಕಲ್ಯಾಣಿ ಕಿಡ್ನ್ಯಾಪ್ ಆಗಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿತ್ತು.

ಮನೆಯವರ ವಿರೋಧದ ನಡುವೆ ಈ ಜೋಡಿ ರಾಯಚೂರಿನ ಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಮದುವೆಯಾಗಿದ್ದಾರೆ. ತರುವಾಯ ಈ ನವ ಜೋಡಿ ಬೆಂಗಳೂರಿಗೆ ಬಂದು ರಕ್ಷಣೆ ಕೋರುತ್ತಿದ್ದಾರೆ.

ನನಗೂ ಮತ್ತು ಪ್ರಿಯಕರನಿಗೂ ಜೀವ ಬೆದರಿಕೆ ಇದೆ ರಕ್ಷಣೆ ಕೊಡಿ ಎಂದು ಜಯಕಲ್ಯಾಣಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದು ಮನವಿ ಮಾಡಿದ್ದಾರೆ.

Comments are closed.