ಮಂಗಳೂರು: ನಗರದ ನಂದಿಗುಡ್ಡೆಯ ಅಪಾರ್ಟ್ ಮೆಂಟ್ವೊಂದರ ಫ್ಲ್ಯಾಟ್’ನಲ್ಲಿ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣ ಸಂಬಂಧ ಮಂಗಳೂರು ಸಿಸಿಬಿ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಬಂಧಿತ ಆರೋಪಿಗಳ ಸಂಖ್ಯೆಯೂ 14ಕ್ಕೆ ಏರಿದೆ.
ಬಂಧಿತ ಆರೋಪಿಗಳನ್ನು ಕದ್ರಿ ಟೋಲ್ ಗೇಟ್ ನಿವಾಸಿ ಮೊಹಮ್ಮದ್ ಆಲಿ (74), ಕಾಸರಗೋಡು ಉಪ್ಪಳ ನಿವಾಸಿ ಇಸ್ಮಾಯಿಲ್ (41), ಕುಲಶೇಖ ನಿವಾಸಿ ಲಿಯೋನಾರ್ಡ್ ಸಿಕ್ವೇರಾ (62), ವ್ಯಾಸ ನಗರ ನಿವಾಸಿ ರಶೀದ್ ಸಾಹೇಬ್ (74) ಎಂದು ಗುರುತಿಸಲಾಗಿದೆ.
ಬ್ಲ್ಯಾಕ್ ಮೇಲ್ ಮಾಡಿ ವೇಶ್ಯಾವಾಟಿಕೆ ಬಳಸಲಾಗಿದೆ ಎಂದು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೋರ್ವಳು ನೀಡಿದ ದೂರಿನಂತೆ ಒಟ್ಟು 5 ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅದಕ್ಕೆ ಸಂಬಂಧಿಸಿ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ವೇಶ್ಯಾವಾಟಿಕೆಯಲ್ಲಿ ಮತ್ತೋರ್ವಳು ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕೂಡಾ ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ತಿಳಿದುಬಂದ ಹಿನ್ನಲೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಕೆಲವು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
Comments are closed.