ಕರಾವಳಿ

ಅನಾಥ ಮಕ್ಕಳಿಬ್ಬರನ್ನು ಶೈಕ್ಷಣಿಕವಾಗಿ ದತ್ತು ಪಡೆದ ಅರುಣಕುಮಾರ ಕಲ್ಗದ್ದೆ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

Pinterest LinkedIn Tumblr

ಕುಂದಾಪುರ: ಕರ್ನಾಟಕ ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣಕುಮಾರ ಕಲ್ಗದ್ದೆ ಅವರು ಮಾ.8ರಂದು ಯಾದಗಿರಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗುರಮಿಠಕಲ್ ತಾಲ್ಲೂಕಿನ ಮಾದ್ವಾರ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳಾಗಿದ್ದ ಇಬ್ಬರು ಅನಾಥ ಮಕ್ಕಳನ್ನು ಶೈಕ್ಷಣಿಕ ವಿಚಾರದಲ್ಲಿ ದತ್ತು ಪಡೆದಿದ್ದಾರೆ.

ಈ ಇಬ್ಬರು ವಿದ್ಯಾರ್ಥಿಗಳು ಕೂಡಾ ಚಿಕ್ಕವರಾಗಿದ್ದಾಗಲೇ ಪೋಷಕರನ್ನು ಕಳೆದುಕೊಂಡು ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ತಿಳಿದ ತಕ್ಷಣ ಅರುಣಕುಮಾರ ಕಲ್ಗದ್ದೆ ಅವರು ಈ ಇಬ್ಬರು ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸಕ್ಕಾಗಿ ಬರುವ ವೆಚ್ಚವನ್ನು ನೀಡುವುದಲ್ಲದೆ ಈ ಇಬ್ಬರನ್ನು ಅವರ ವಿದ್ಯಾಭ್ಯಾಸ ಪೂರ್ಣಗೊಳ್ಳುವವರೆಗೂ ಶೈಕ್ಷಣಿಕವಾಗಿ ದತ್ತು ಪಡೆದುಕೊಂಡಿದ್ದು ಇವರ ಈ ಕಾರ್ಯಕ್ಕೆ ಮಾದ್ವಾರ ಗ್ರಾಮದ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ಯಾದಗಿರಿ ತಾಲ್ಲೂಕಿನ ಗೊಂದೆಡಗಿ ಗುರಮಿಠಕಲ್ ತಾಲ್ಲೂಕಿನ ಯಲಸತ್ತಿ , ಕೊಂಕಲ, ಚೆಲೇರಿ ಗ್ರಾಮಗಳಿಗೆ ಭೇಟಿ ನೀಡಿ ಹಿಂದುಳಿದ ಜಾತಿಗಳ ಜನರ ಅಹವಾಲುಗಳನ್ನು ಸ್ವೀಕರಿಸಿ ಕುಂದು ಕೊರತೆಗಳನ್ನು ವಿಚಾರಿಸಿದರು.

ಚಲೇರಿ ಗ್ರಾಮದ ಬಹುದಿನಗಳ ಸಮಸ್ಯೆಯಾದ ಗಡಿ ಒತ್ತುವರಿ ಮತ್ತು ದೌರ್ಜನ್ಯದಿಂದ ತೆಲಂಗಾಣದವರು ಅಕ್ರಮ ಮರಳು ಸಾಗಣಿಕೆಯನ್ನು ನಿಲ್ಲಿಸಲು ಸರಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಮತ್ತು ಇದಕ್ಕೆ ಸಂಭಂದಿಸಿದ ಉಸ್ತುವಾರಿ ಸಚಿವರ ಜೊತೆಯಲ್ಲಿ ಹಾಗೂ ಅಧಿಕಾರಿಗಳ ಜೊತೆಯಲ್ಲಿ ಪ್ರಸ್ತಾಪಿಸಿ ಮನವಿ ಮಾಡಿ ಶಾಶ್ವತ ಪರಿಹಾರ ಒದಗಿಸಲು ಎಂದು ಅರುಣಕುಮಾರ ಕಲ್ಗದ್ದೆ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವಮಾನವ ಫೌಂಡೇಶನ್ ಸಂಸ್ಥಾಪಕಿ ಚಂದ್ರಾವತಿ ಅವರು ಮಾತನಾಡಿ, ಈ ಇಬ್ಬರ ವಿದ್ಯಾರ್ಥಿಗಳು ಯೋಗ ಕ್ಷೇಮವನ್ನು ನಮ್ಮ ವಿಶ್ವಮಾನವ ಫೌಂಡೇಶನ್ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ವ್ಯವಸ್ಥಾಪಕ ಪ್ರಕಾಶ ಮೊಗವೀರ, ಅಶ್ವಿತ್ ಪೂಜಾರಿ ಉಪ್ಪಳ, ಶಂಕರ ಕಂದಕೂರ, ಶ್ರೀನಿವಾಸ ಕೇಶ್ವಾರ, ಶಿವಶಂಕರ ಯಲಸತ್ತಿ, ಜಲ್ಲಪ್ಪ ಚಿಂತನಹಳ್ಳಿ, ಪ್ರಭುಲಿಂಗ ಗೊಂದೆಡಗಿ, ಆಂಜನೇಯ ಕಟ್ಟಿಮನಿ ರಾಂಪೂರ ಇದ್ದರು.

Comments are closed.