ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ಲಾರಿ ಚಾಲಕನಿಗೆ ರಸ್ತೆಯಲ್ಲಿಯೇ ಕಾರು ಚಾಲಕನೊಬ್ಬ ಹಲ್ಲೆಗೈದು, ಅವಾಚ್ಯವಾಗಿ ನಿಂದಿಸಿದ ಘಟನೆ ಕುಂದಾಪುರ ತಾಲೂಕಿನ ಕಾಳಾವರ ಸಮೀಪದ ಅಸೋಡಿನಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಲ್ಲೂರು ಗೋದಾಮಿನಿಂದ ನ್ಯಾಯ ಬೆಲೆ ಅಂಗಡಿಗಳಿಗೆ ಅಕ್ಕಿ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯ ಅಕ್ಕಿ ಸಾಗಾಟದ ಲಾರಿ ಚಾಲಕ ಸಿಗಂದೂರು ಮೂಲದ ಮಹಮ್ಮದ್ ಇಸಾಕ್ ಅವರಿಗೆ ಕೋಟೇಶ್ವರ ಹಾಲಾಡಿ ರಸ್ತೆಯ ಅಸೋಡು ನಂದಿಕೇಶ್ವರ ದೇಗುಲದ ಕಮಾನು ಬಳಿ ಹಿಂದಿನಿಂದ ಬಂದ ರಿಟ್ಸ್ ಕಾರಿನ ಚಾಲಕ, ಕಾರನ್ನು ಮುಂದಕ್ಕೆ ತಂದು ನಿಲ್ಲಿಸಿ ಹಲ್ಲೆಗೈದಿದ್ದಾನೆ. ಈ ಘಟನೆ ಮಾ.4 ರಂದು ನಡೆದಿದ್ದು ಬೆದರಿದ ಚಾಲಕ ದೂರು ನೀಡಲು ವಿಳಂಭವಾಗಿದ್ದರಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಾರು ಚಾಲಕ ಕಾರಿನಿಂದ ಇಳಿದು ಹೋಗಿ ಲಾರಿ ಚಾಲಕನಿಗೆ ಹೊಡೆಯುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರು ಚಾಲಕನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಾರು ಚಾಲಕನ ವಿರುದ್ಧ ಇಸಾಕ್ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.