ಉಡುಪಿ: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು, ಸಿಬಂದಿ ಸಹಿತ 2021 ನೇ ಸಾಲಿನಲ್ಲಿ ರಾಜ್ಯದ 135 ಮಂದಿಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದ್ದು ಆ ಪೈಕಿ ಉಡುಪಿ ಜಿಲ್ಲೆಯ ಇಬ್ಬರು ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.
ಉಡುಪಿ ಜಿಲ್ಲಾ ಡಿಎಆರ್ ಡಿವೈಎಸ್ಪಿ ರಾಘವೇಂದ್ರ ಆರ್ ನಾಯಕ್ ಮತ್ತು ಡಿಸಿಆರ್‌ಬಿ ಸಿಹೆಚ್‌ಸಿ ಬಿ. ವಿಜಯ್ ಕುಮಾರ್ ಅವರಿಗೆ ಅವರಿಗೆ ಕರ್ತವ್ಯದ ವೇಳೆ ತೋರಿದ ಸಾಧನೆಗಾಗಿ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ ರಾಘವೇಂದ್ರ ನಾಯಕ್ 2006ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆ ಗೊಂಡಿದ್ದು, 2007ರಿಂದ ಮಂಗಳೂರಿನಲ್ಲಿ ಕರ್ತವ್ಯ ಆರಂಭಿಸಿದರು. ಬಳಿಕ 2019ರಲ್ಲಿ ಉಡುಪಿ ಡಿಎಆರ್‌ಗೆ ವರ್ಗಾವಣೆ ಗೊಂಡ ಇವರು, ಎರಡು ವರ್ಷಗಳ ಹಿಂದೆ ಡಿವೈಎಸ್ಪಿಯಾಗಿ ಭಡ್ತಿ ಪಡೆದಿದ್ದರು.
ಬೆಳ್ತಂಗಡಿಯ ಕಲ್ಲಗುತ್ತು ನಿವಾಸಿ ವಿಜಯ ಕುಮಾರ್ 1993ರಲ್ಲಿ ಇಲಾಖೆಗೆ ಸೇರ್ಪಡೆಗೊಂಡಿದ್ದು, ಬಳಿಕ ಮಂಗಳೂರು, ಕುಂದಾಪುರ, ಹಿರಿಯಡ್ಕ, ಉಡುಪಿ ನಗರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2011ರಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿ ಭಡ್ತಿ ಹೊಂದಿರುವ ಇವರು ಪ್ರಸ್ತುತ ಜಿಲ್ಲಾ ತಕ್ಷೀರು ಅಭಿಲಾಖೆ ಸಂಗ್ರಹಾಲಯ(ಡಿಸಿಆರ್‌ಬಿ)ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Comments are closed.