ಕರ್ನಾಟಕ

ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯದ ಮುಸ್ಕಾನ್’ಗೆ ಅಲ್ ಖೈದಾ ಮುಖ್ಯಸ್ಥನಿಂದ ಬಹುಪರಾಕ್..!

Pinterest LinkedIn Tumblr

ಬೆಂಗಳೂರು: ಉಡುಪಿಯಲ್ಲಿ ಆರಂಭಗೊಂಡು ರಾಜ್ಯಾದ್ಯಂತ ಪಸರಿಸಿದ ಹಿಜಾಬ್ ವಿವಾದಕ್ಕೆ ಇದೀಗ ಉಗ್ರ ಸಂಘಟನೆ ಅಲ್ ಖೈದಾ ಎಂಟ್ರಿ ಕೊಟ್ಟಿದೆ.

ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಮೋಸ್ಟ್ ವಾಂಟೆಡ್ ಉಗ್ರ ಅಯ್ಮಾನ್ ಅಲ್ ಜವಾಹಿರಿ, ಮಂಡ್ಯದಲ್ಲಿ ಹಿಜಾಬ್ ವಿರೋಧಿಸಿ ಜೈ ಶ್ರೀರಾಮ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಅವರನ್ನು ಹಾಡಿ ಹೊಗಳಿದ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಮುಸ್ಕಾನ್ ಖಾನ್ ಅವರನ್ನು ಹೊಗಳಿ 9 ನಿಮಿಷಗಳ ವೀಡಿಯೊವನ್ನು ಬಿಡುಗಡೆ ಮಾಡಿರುವ ಜವಾಹಿರಿ, ಹಿಜಾಬ್ ನಿಷೇಧದ ವಿರುದ್ಧ ಧ್ವನಿ ಎತ್ತುವಂತೆ ಭಾರತೀಯ ಮುಸ್ಲಿಮರಿಗೆ ಕರೆ ನೀಡಿದ್ದಾನೆ.

ವಿಡಿಯೋದಲ್ಲಿ ಭಾರತದ ಹಿಂದೂ ಪ್ರಜಾಪ್ರಭುತ್ವದಲ್ಲಿ ಮುಸ್ಲಿಮರು ಕಿರುಕುಳಕ್ಕೆ ಒಳಗಾಗಿದ್ದು, ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯದ ಮುಸ್ಕಾನ್ ಭಾರತದ ಮಹಾನ್ ಮಹಿಳೆ(ನೋಬಲ್ ವುಮೆನ್ ಆಫ್ ಇಂಡಿಯಾ) ಎಂದು ಕರೆದಿದ್ದಾನೆ. ಅಲ್ಲದೆ ಮುಸ್ಕಾನ್ ನನ್ನು ಹೊಗಳಿ ಕವನ ಕೂಡ ಓದಿದ್ದಾನೆ.

ಸಾಮಾಜಿಕ ಮಾಧ್ಯಮದ ಮೂಲಕ ಮುಸ್ಕಾನ್ ಬಗ್ಗೆ ತಿಳಿದಿದೆ ಎಂದು ವಿಡಿಯೋದಲ್ಲಿ ಜವಾಹಿರಿ ಹೇಳಿದ್ದಾನೆ. ಈ ಸಹೋದರಿ ತಕ್ಬೀರ್ (ಅಲ್ಲಾಹು ಅಕ್ಬರ್) ಧ್ವನಿಯನ್ನು ಎತ್ತುವ ಮೂಲಕ ನನ್ನ ಹೃದಯವನ್ನು ಗೆದ್ದಿದ್ದಾಳೆ ಎಂದು ಉಗ್ರ ಹೇಳಿದ್ದಾನೆ.

ಜವಾಹಿರಿಯ ಈ ವೀಡಿಯೊವನ್ನು ಅಲ್ ಖೈದಾದ ಅಧಿಕೃತ ಶಬಾಬ್ ಮೀಡಿಯಾ ಬಿಡುಗಡೆ ಮಾಡಿದೆ. ಒಸಾಮಾ ಬಿನ್ ಲಾಡೆನ್ ನಂತರ ಅಲ್ ಖೈದಾ ನಾಯಕ ಜವಾಹಿರಿ ಕರ್ನಾಟಕ ಮೂಲದ ಕಾಲೇಜು ವಿದ್ಯಾರ್ಥಿ ಮುಸ್ಕಾನ್ ಖಾನ್ ಅವರನ್ನು ಹೊಗಳಿದ್ದು ವಿಡಿಯೋಗೆ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಶೀರ್ಷಿಕೆ ನೀಡಲಾಗಿದೆ.

Comments are closed.