ಕರಾವಳಿ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಿಗೆ 400 ಗ್ರಾಂ ಚಿನ್ನದ ಮೀನಿನ ಸರ ಸಮರ್ಪಣೆ!

Pinterest LinkedIn Tumblr

ಉಡುಪಿ: ಕಾಪು ತಾಲೂಕಿನ ಉಚ್ಚಿಲದ ಮೊಗವೀರ ಸಮುದಾಯದ ಶ್ರೀ ಮಹಾಲಕ್ಷ್ಮೀ ದೇವಿಯ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ರಥೋತ್ಸವ ಮತ್ತು ನಾಗಮಂಡಲ ಕಾರ್ಯಕ್ರಮಗಳು ನಡೆಯುತ್ತಿವೆ.

ಈ ಪ್ರಯುಕ್ತ ಮಂಗಳೂರಿನ ಸೌತ್ ವಾರ್ಫ್ ಯಾಂತ್ರಿಕ ಮೀನುಗಾರರ ಸಹಕಾರಿ ಸಂಘ ನಿಯಮಿತದ ವತಿಯಿಂದ ದೇವಿಗೆ ಅಪರೂಪದ ಚಿನ್ನದ ಮೀನಿನ ಸರವನ್ನು ಸಮರ್ಪಿಸಲಾಯಿತು,

ಚಿನ್ನದಲ್ಲಿ ಮೀನಿನ ರೂಪಗಳಿಂದ ರಚಿಸಲಾಗಿರುವ ಈ ಸರವು ಸುಮಾರು 50 ಪವನ್ (400 ಗ್ರಾಂ) ತೂಕವಿದ್ದು, ಅತ್ಯಾಕರ್ಷಕವಾಗಿದೆ.

ಮೊಗವೀರ ಸಮುದಾಯದವರು ತಮ್ಮ ಕುಲವೃತ್ತಿಯಾದ ಮೀನುಗಾರಿಕೆಯ ಸ್ಮರಣಾರ್ಥ ಈ ಸರವನ್ನು ದೇವಿಗೆ ಸಮರ್ಪಿಸಿದ್ದಾರೆ.

Comments are closed.