ಬೆಳ್ತಂಗಡಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿ ಅಬ್ದುಲ್ ಲತೀಫ್ ಎಂಬಾತನನ್ನು ವೇಣೂರು ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಯ ಮೇಲೆ ಈ ಹಿಂದೆ ವಾರಂಟ್ ಜಾರಿಯಾಗಿತ್ತು. ಉಡುಪಿಜಿಲ್ಲೆ ಕುಂದಾಪುರ ಪೊಲೀಸ್ ಉಪವಿಭಾಗದ ಶಂಕರನಾರಾಯಣ ಠಾಣೆಯ ಪೋಲಿಸರು ಬೆಳ್ತಂಗಡಿ ತಾಲೂಕು ಪಿಲ್ಯ ಗ್ರಾಮದ ಗೋಳಿಕಟ್ಟೆ ಎಂಬಲ್ಲಿಗೆ ವಾರೆಂಟ್ ಹಿನ್ನೆಲೆ ತೆರಳಿದ್ದಾಗ ಆರೋಪಿ ಅಲ್ಲಿ ಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಗುರುತಿನ ಚೀಟಿ ತೋರಿಸಿ ನಿಮಗೆ ನ್ಯಾಯಾಲಯದ ವಾರಂಟ್ ಇದೆ ಎಂದು ಹೇಳಿ ವಾರಂಟ್ ಪ್ರತಿಯನ್ನು ತೋರಿಸಿ ತಮ್ಮೊಂದಿಗೆ ಬರುವಂತೆ ತಿಳಿಸಿದ್ದಾರೆ. ಈ ವೇಳೆ ಆರೋಪಿ ವಾರಂಟನ್ನು ಕಿತ್ತುಕೊಂಡು ನೀವು ಯಾವ ಸೀಮೆಯ ಪೊಲೀಸರು ನನ್ನನ್ನು ಏನು ಮಾಡಲು ಆಗುವುದಿಲ್ಲಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪೊಲೀಸರ ಕಾಲರ್ ಹಿಡಿದು ಉರುಡಾಟ ನಡೆಸಿದ್ದಾನೆ.
(ಸಾಂದರ್ಭಿಕ ಚಿತ್ರ)
ಬಳಿಕ ಇತರ ಆರೋಪಿಗಳನ್ನು ಕರೆದು ಅಕ್ರಮಕೂಟ ಸೇರಿಸಿ ಪೋಲಿಸರ ಎಡಕೈ ತೋರುಬೆರಳಿಗೆ ಕಚ್ಚಿ ಗಾಯಗೊಳಿಸಿದ್ದಾನೆ. ಅಲ್ಲದೆ, ಆರೋಪಿಗಳು ಕೈಯಿಂದ ಹೊಡೆದು ಕಲ್ಲು ಎಸೆದು ಹಲ್ಲೆ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ.
ಈ ಸಂಬಂಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿ ಅಬ್ದುಲ್ ಲತೀಫ್‌ನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Comments are closed.