ರಾಮನಗರ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲೇ ಒಳಜಗಳ ನಡೆಯುತ್ತಿದ್ದು, ಈಶ್ವರಪ್ಪನವರೇ ಕಾಂಗ್ರೆಸ್ನವರಿಗೆ ಆಹಾರವಾಗಬೇಡಿ. ನಿಮ್ಮ ವಿರುದ್ಧ ನಿಮ್ಮ ಪಕ್ಷದಲ್ಲೇ ಚಿತಾವಣೆ ನಡೆಯುತ್ತಿದೆ ಎಂದರು.
ಇನ್ನು ಎಲ್ಲಾ ಇಲಾಖೆಯಲ್ಲೂ ಕಮಿಷನ್ ನಡೆಯುತ್ತಿದ್ದು, ಇದೊಂದು ಇಲಾಖೆಗೆ ಮಾತ್ರ ಯಾಕೆ ಪರ್ಸೆಂಟೆಜ್ ಆರೋಪ ಮಾಡಿದ್ದೀರಿ. ಈಶ್ವರಪ್ಪ ನವರ ಮೇಲೆ ಆರೋಪ ಮಾಡುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಸಚಿವ ಈಶ್ವರಪ್ಪ ಈ ಕಳಂಕದಿಂದ ಹೊರಬೇಕು ಹೀಗಾಗಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
Comments are closed.