ಚೆನ್ನೈ: ನಾವು ಭಾರತೀಯರು ಎಂದು ಸಾಬೀತುಪಡಿಸಲು ಹಿಂದಿ ಕಲಿಯಲೇಬೇಕಾದ ಅಗತ್ಯವಿಲ್ಲ. ತಮಿಳು ಭಾಷೆ ಕೂಡ ಅದಕ್ಕೆ ಸಮಾನ ಮಾನ್ಯತೆ ಹೊಂದಿದೆ ಎಂದು ತಮಿಳುನಾಡು ಬಿಜೆಪಿ ಮುಖಂಡ ಕೆ. ಅಣ್ಣಾಮಲೈ ಹೇಳಿದ್ದಾರೆ.
ತಮಿಳುನಾಡಿನ ಜನರ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡುವುದು ಸರಿಯಲ್ಲ. ಅದನ್ನು ಪಕ್ಷವಾಗಲೀ, ಅಥವಾ ನಾವಾಗಲೀ ಮಾಡುವುದಕ್ಕೆ ಹೋಗುವುದಿಲ್ಲ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಓರ್ವ ವ್ಯಕ್ತಿ ಉದ್ಯೋಗ ಇಲ್ಲವೇ ಇತರ ಅಗತ್ಯಕ್ಕೆ ಬೇಕಾದಲ್ಲಿ ಆತನಿಗೆ ಬೇಕಾದ ಭಾಷೆ ಕಲಿಯಲು, ಬಳಕೆ ಮಾಡಲು ಅವಕಾಶವಿದೆ. ಅದು ಹಿಂದಿಯೇ ಆಗಿರಬೇಕು ಎಂದೇನಿಲ್ಲ. ಯಾವುದೇ ಸ್ಥಳೀಯ ಭಾಷೆಯಾದರೂ ಆಗಬಹುದು ಎಂದು ಅಣ್ಣಾಮಲೈ ಹೇಳಿದ್ದಾರೆ.
ದೇಶದಲ್ಲಿ ಇಂಗ್ಲಿಷ್ಗೆ ಪರ್ಯಾಯವಾಗಿ ಹಿಂದಿ ಬಳಕೆ ಮಾಡಬೇಕು ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಯಾಗಿ ಅಣ್ಣಾಮಲೈ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನನಗೆ ಯಾವುದೇ ಭಾಷೆಯ ಬಗ್ಗೆ ಅಗೌರವ, ದ್ವೇಷ ಇಲ್ಲ. ಆದರೆ ತಮಿಳಿನ ಮೇಲೆ ಹಿಂದಿ ಅಥವಾ ಇನ್ನೊಂದು ಭಾಷೆ ಹೇರುವುದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Comments are closed.