ಕರಾವಳಿ

ಅಪಘಾತದಲ್ಲಿ ಮಂಗಳೂರು ಅಗ್ನಿಶಾಮಕ ಸಿಬ್ಬಂದಿ ದುರ್ಮರಣ: 6 ತಿಂಗಳ ಪುತ್ರನ ಕೊಂದು ಪತ್ನಿ ಆತ್ಮಹತ್ಯೆ

Pinterest LinkedIn Tumblr

ಮಂಗಳೂರು: ಮಂಗಳೂರು ಅಗ್ನಿಶಾಮಕ ಇಲಾಖೆಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ಕುಂಟಿಕಾನ ಬಳಿ ರಸ್ತೆ ದಾಟುತ್ತಿದ್ದಾ‌ಗ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪತಿ ಸಾವಿನ ಸುದ್ದಿ ತಿಳಿದು ಪತ್ನಿಯೂ ತಮ್ಮ6 ತಿಂಗಳ ಪುತ್ರನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಗಂಗಾಧರ ಬಿ. ಕಮ್ಮಾರ (36) ಅಪಘಾತದಲ್ಲಿ ಮೃತಪಟ್ಟವರು. ಶನಿವಾರ ರಾತ್ರಿಸುಮಾರಿಗೆ ಎನ್‌ಎಚ್-66 ರಲ್ಲಿ ಕುಂಟಿಕಾನ ಬಳಿ ರಸ್ತೆ ದಾಟುವಾಗ ಬೆಂಗಳೂರಿಂದ ಕುಂದಾಪುರಕ್ಕೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಗಾಧರ ರವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಮಂಗಳೂರು ಸಂಚಾರ ಪೂರ್ವ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಇತ್ತ ತನ್ನ ಪತಿ ಅಪಘಾತದಲ್ಲಿ ಮೃತಪಟ್ಟಿರುವ ವಿಷಯ ತಿಳಿದ ಪತ್ನಿ ಶೃತಿ (30) ಅವರು ರಾತ್ರಿ 10 ಗಂಟೆಗೆ 6 ತಿಂಗಳ ಪುತ್ರ ಅಭಿರಾಮನನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಶ್ರುತಿ ಅವರು ತಮ್ಮ ತಮ್ಮನ ಮನೆಯಲ್ಲಿದ್ದರು ಎನ್ನಲಾಗಿದೆ.

Comments are closed.