ಉಡುಪಿ: ಮಹಿಳೊಬ್ಬರು ತನ್ನ ಎರಡು ವರ್ಷದ ಮಗಳೊಂದಿಗೆ ಎಂಜಿಎಂ ಕಾಲೇಜು ಬಳಿಯ ಬಾಡಿಗೆ ಮನೆಯಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಹನುಮಂತ ವಡ್ಡರ ಅವರ ಪತ್ನಿ ಪದ್ಮಾ ಎಂಬುವರು ಏಪ್ರಿಲ್ 15 ರಿಂದ ಎರಡು ವರ್ಷ ಪ್ರಾಯದ ಮಗಳು ಪ್ರಣತಿ ಜೊತೆ ನಾಪತ್ತೆಯಾಗಿದ್ದಾರೆ . ಬಟ್ಟೆ ತರುವುದಾಗಿ ಪತಿಗೆ ಹೇಳಿ ಮನೆಯಿಂದ ಹೋಗಿರುವುದಾಗಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸತತವಾಗಿ ಹುಡುಕಾಟ ನಡೆಸಿದರೂ ಕೂಡ ಈವರೆಗೂ ಪದ್ಮಾ ಅವರ ಮನೆ ಹಾಗೂ ಸಂಬಂಧಿಕರ ಮನೆಗಳಲ್ಲಿ ಪತ್ತೆಯಾಗಿಲ್ಲ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.