ಉಡುಪಿ: ಮನೆಯಲ್ಲಿನ ಹಾಲ್ ಟಿಪಾಯಿ ಮೇಲೆ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನವನ್ನು ಕಿಟಕಿ ಮೂಲಕ ಕಳವು ಮಾಡಿಕೊಂಡು ಹೋಗಿದ್ದ ಆರೋಪಿಯನ್ನು ಉಡುಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಇಂದ್ರಾಳಿ ಮಂಚಿಕೆರೆ ನಿವಾಸಿ ಗುರುರಾಜ್ ನಾಯ್ಕ್ (35) ಎಂದು ಗುರುತಿಸಲಾಗಿದೆ.
ಘಟನೆ ವಿವರ….
ಮಾರ್ಚ್ 26 ರಂದು ಗುಂಡಿಬೈಲು ಪಾಡಿಗಾರ ನಿವಾಸಿ ಮಹಿಳೆಯೊಬ್ಬರು ಮನೆಯ ಹಾಲ್‌ನ ಟಿಪಾಯಿ ಮೇಲೆ ಇಟ್ಟಿದ್ದ 6½ ಪವನ್ ತೂಕದ ಚಿನ್ನದ ತೆಂಡೂಲ್ಕರ್ ಚೈನ್ ಮತ್ತು ನೀಲಿ ಹರಳಿನ ಲೋಕೆಟ್ ಇರುವ 3½ ಪವನ್ ತೂಕದ ಚಿನ್ನದ ಚೈನ್ ನ್ನು ಮನೆಯ ಕಿಟಕಿಯ ಮೂಲಕ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು. ಕಳವಾರದ ಆಭರಣಗಳ ಒಟ್ಟು ಅಂದಾಜು ಮೌಲ್ಯ 3 ಲಕ್ಷದ 60 ಸಾವಿರ ರೂ. ಆಗಿದ್ದು ಈ ಬಗ್ಗೆ ಮಹಿಳೆ ನಗರ ಠಾಣೆಗೆ ದೂರು ನೀಡಿದ್ದರು.
ಪೊಲೀಸರ ತಂಡಕ್ಕೆ ಸಿಕ್ಕಿಬಿದ್ದ ಆರೋಪಿ…
ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿ ಹೋದ ಪಿಎಸ್ಐ ಪ್ರಸಾದ್‌ಕುಮಾರ್ ಕೆ. ಹಾಗೂ ಸಿಬ್ಬಂದಿಯವರು ಆರೋಪಿಯನ್ನು, ಕಳವಾಗಿದ್ದ ಚಿನ್ನದ ಚೈನ್ ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕದ್ದ ಸ್ಕೂಟರ್ ನ ಸಮೇತ ಕುಕ್ಕಿಕಟ್ಟೆ ರೈಲ್ವೇ ಬ್ರಿಡ್ಜ್ ಬಳಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು ಬಂಧನ ನಿಯಮ ಪಾಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿ ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ಪತ್ತೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ಆದೇಶದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ಸುಧಾಕರ ಸದಾನಂದ ನಾಯ್ಕ್ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಪಿ, ಪಿ.ಎಸ್.ಐ ಮಹೇಶ್ ಟಿ.ಎಮ್, ತನಿಖಾ ವಿಭಾಗದ ಪಿಎಸ್ಐ ಪ್ರಸಾದ್‌ಕುಮಾರ್ ಕೆ. ಪಿ.ಎಸ್.ಐ ವಾಸಪ್ಪ ನಾಯ್ಕ್, ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ವಿಜಯ್, ಸತೀಶ್, ಜೀವನ್, ಕಿರಣ್, ಸಂತೋಷ ರಾಠೋಡ್, ಹೇಮಂತ್ ಸಹಕರಿಸಿದ್ದರು.
Comments are closed.