ಕರಾವಳಿ

ಪ್ರೇಮಿಗಳ ಮನಸ್ತಾಪ: ಮೊಬೈಲ್ ಟವರ್ ಏರಿದ ಯುವಕನನ್ನು ಕೆಳಗಿಳಿಸಲು ಬರಲೇಬೇಕಾಯ್ತು ಪ್ರೇಯಸಿ..!

Pinterest LinkedIn Tumblr

ಮಂಗಳೂರು: ಪ್ರೇಮಿಗಳಲ್ಲಿನ ಮನಸ್ತಾಪದ ಹಿನ್ನೆಲೆ ಯುವಕನೊಬ್ಬ ಮೊಬೈಲ್ ಟವರ್ ಏರಿ‌ ಹೈಡ್ರಾಮ ಮಾಡಿದ ಘಟನೆ ಸೋಮವಾರ ಬೆಳಗ್ಗೆ ಮಂಗಳೂರಿನ ಅಡ್ಯಾರ್ ಎಂಬಲ್ಲಿ ನಡೆದಿದೆ.

ಬಂಟ್ವಾಳ ಮೂಲದ ಯುವಕ ಟವರ್ ಏರಿ ಕೆಲ ಕಾಲ ಆತಂಕ ಸೃಷ್ಟಿಸಿದ್ದಾನೆ. ಆತ ಕೆಲ ಸಮಯಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತಿದ್ದು ಅವರಿಬ್ಬರ ನಡುವೆ ಮನಸ್ತಾಪವಾಗಿತ್ತೆನ್ನಲಾಗಿದೆ.‌ ಇದರಿಂದ ನೊಂದು ಆತ ಈ ನಿರ್ಧಾರ ಮಾಡಿದ್ದಾನೆ ಎನ್ನಲಾಗಿದೆ.

ಸೋಮವಾರ ಕಟ್ಟಡವೊಂದರ ಮೇಲಿದ್ದ ಟವರ್ ಮೇಲೆ ಕುಳಿತಿದ್ದ. ಅಗ್ನಿಶಾಮಕ ದಳ ಸಿಬ್ಬಂದಿ ಸಹಿತ ಯಾರೇ‌ ಮನವೊಲಿಸಿದರೂ ಕೂಡ ಈತ ಕೆಲಗಿಳಿದರಿರಲಿಲ್ಲ. ಬಳಿಕ ತನ್ನ ಪ್ರೇಯಸಿ ಹುಡುಗಿ ಬಂದು ಮನವೊಲಿಸಿದ ನಂತರ ಆತ ಟವರ್ ನಿಂದ ಕೆಳಗೆ ಇಳಿದಿದ್ದಾನೆ.

ಯುವಕನ ಕುರಿತಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮನವಿ ಸಲ್ಲಿಸಲಾಗಿದ್ದು, ಟವರ್ ಇಳಿದ ಬಳಿಕ ವಶಕ್ಕೆ ಪಡೆದ ಹೊಯ್ಸಳ ಪೊಲೀಸರು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Comments are closed.