ಉಡುಪಿ: ಕರ್ತವ್ಯನಿರತ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ತನ್ನ ಸರ್ವೀಸ್ ರೈಫಲ್ ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಆದಿ ಉಡುಪಿ ಪ್ರೌಢಶಾಲೆ ಬಳಿ ಏ. 29ರ ಶುಕ್ರವಾರ ನಡೆದಿದೆ.
ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್‌ಟೇಬಲ್ ಅಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಕುಂದರ್ ಆತ್ಮಹತ್ಯೆಗೆ ಶರಣಾದವರು.
ಇವರು ಇಂದು ಆದಿಉಡುಪಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಉತ್ತರ ಪತ್ರಿಕೆ ಕೊಠಡಿಯ ಭದ್ರತಾ ನಿರ್ವಹಣೆಯಲ್ಲಿದ್ದ ಕರ್ತವ್ಯನಿರತರಾಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
Comments are closed.