ಕರ್ನಾಟಕ

ಯುವತಿ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದ ನಾಗೇಶ್ ಅರೆಸ್ಟ್; ತಮಿಳುನಾಡಿನಲ್ಲಿ ಸ್ವಾಮೀಜಿ ವೇಷದಲ್ಲಿ ಅಡಗಿದ್ದ ನಾಗ ಬಂಧನ…!

Pinterest LinkedIn Tumblr

ಬೆಂಗಳೂರು: ಯುವತಿಯ ಮೇಲೆ ಆಸಿಡ್ ಎರಚಿ ತಲೆಮರೆಸಿಕೊಂಡಿದ್ದ ನಾಗೇಂದ್ರನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಯುವತಿ ಮೇಲೆ ಆಸಿಡ್ ಎರಚಿದ್ದ ನಾಗೇಶ್ ಕಡೆಗೂ ಅರೆಸ್ಟ್ ಆಗಿದ್ದಾನೆ. ತಮಿಳುನಾಡಿನಲ್ಲಿ ಕದ್ದು ಅಡಗಿ ಕೂತಿದ್ದ ನಾಗನ ಬಂಧನವಾಗಿದೆ.

ಸ್ವಾಮೀಜಿಯ ವೇಷ ಧರಿಸಿ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಕಳೆದ 16 ದಿನಗಳಿಂದ ತಲೆಮರೆಸಿಕೊಂಡಿದ್ದ ನಾಗೇಶ್ ನನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ.

ಏಪ್ರಿಲ್ 28 ರಂದು ಬೆಂಗಳೂರಿನ ಸುಂಕದಕಟ್ಟೆ ಬಳಿ ಆರೋಪಿ ನಾಗೇಶ್ 23 ವರ್ಷದ ಯುವತಿ ಮೇಲೆ ನಾಗೇಂದ್ರ ಆಸಿಡ್ ಎರಚಿ ಪರಾರಿಯಾಗಿದ್ದ. ಆರೋಪಿ ಪ್ರೀತಿಸುವಂತೆ ಹಲವು ವರ್ಷಗಳಿಂದ ಯುವತಿಯ ಹಿಂದೆ ಬಿದ್ದಿದ್ದ. ಯುವತಿ ಇದಕ್ಕೆ ಒಪ್ಪಿರಲಿಲ್ಲ. ಇದೇ ಹಿನ್ನೆಲೆಯಲ್ಲಿ ಆತ ಆಸಿಡ್ ದಾಳಿ ನಡೆಸಿದ್ದ.

Comments are closed.