ಕರಾವಳಿ

ಜನರ ಕರೆ ಸ್ವೀಕರಿಸಿ ಅದಕ್ಕೆ ಸ್ಪಂದಿಸುವ ಕೆಲಸ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮಾಡಬೇಕು: ಸಚಿವ ಕೋಟ

Pinterest LinkedIn Tumblr

ಕುಂದಾಪುರ: ಯಾವುದೇ ತುರ್ತು‌ ಸಂದರ್ಭದಲ್ಲಿ ಜನರ ಕರೆ ಸ್ವೀಕರಿಸಿ ಸಮಸ್ಯೆ ಆಲಿಸುವ ಸಲುವಾಗಿ ಅಧಿಕಾರಿಗಳಿಗೆ ಸರ್ಕಾರ ಪೋನ್ ನೀಡಿದೆ. ಎಲ್ಲಾ ಅಧಿಕಾರಿಗಳಿಗೂ ಫೋನ್ ಕರೆ ಸ್ವೀಕರಿಸಲು ಹಾಗೂ ಕರೆ ಸ್ವೀಕರಿಸದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಉಡುಪಿ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕುಂದಾಪುರದ ವಕ್ವಾಡಿಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.

ಡೇಂಗಿ ಬಗ್ಗೆ ಸರಕಾರದಿಂದ ಕ್ರಮ..
ಮುದೂರು ಭಾಗದಲ್ಲಿನ ಡೆಂಗಿ ಜ್ವರದ ಬಗ್ಗೆ ಸರಕಾರ ಗಂಭೀರವಾಗಿ ಕ್ರಮತೆಗೆದುಕೊಂಡಿದೆ. ಜಿಲ್ಲೆಯ ಮೂರು ಶಾಸಕರು ಡಿಸಿ ಜೊತೆಗೆ ಮಾತನಾಡಿದ್ದಾರೆ. ನಾನು ಕೂಡ ಆರೋಗ್ಯ ಮಂತ್ರಿಗಳು ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಜೊತೆ ನಿರಂತರವಾಗಿ ಮಾತನಾಡಿದ್ದು ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದೇನೆ. ಸಮಸ್ಯೆ ಪರಿಹಾರದ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಡೇಂಗಿ ಬಾಧಿತರು ಹೆಚ್ಚಾಗಿ ದಾಖಲಾದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳ ಜೊತೆ ಮಾತನಾಡಿರುವೆ. ಒಂದೆರಡು‌ ದಿನದಲ್ಲಿ ಮುದೂರಿಗೆ ಭೇಟಿ ನೀಡಲಿದ್ದೇನೆ ಎಂದ ಅವರು ಡೆಂಗಿ ಗಂಭೀರ ಸ್ವರೂಪಕ್ಕೊಳಪಟ್ಟು ಸರಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆ ಚಿಕಿತ್ಸೆ ಅನಿವಾರ್ಯ ಎಂದಾದರೆ ಅವರ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಬಹುದೇ ಎಂಬುದರ ಬಗ್ಗೆ ವಿಮರ್ಶಿಸಲಾಗುತ್ತದೆ ಎಂದರು.

Comments are closed.