ಕರ್ನಾಟಕ

ಬೆಂಗಳೂರಿನಲ್ಲಿ ನಡು ಬೀದಿಯಲ್ಲೇ ಬಡಿದಾಡಿಕೊಂಡ ವಿದ್ಯಾರ್ಥಿನಿಯರು; ವಿಡಿಯೋ ವೈರಲ್

Pinterest LinkedIn Tumblr

ಬೆಂಗಳೂರು: ಪ್ರತಿಷ್ಠಿತ ಶಾಲೆಯೊಂದರ ವಿದ್ಯಾರ್ಥಿನಿಯರು ನಡು ಬೀದಿಯಲ್ಲಿಯೇ ಗಲಾಟೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಶಾಲಾ ಸಮವಸ್ತ್ರದಲ್ಲಿಯೇ ವಿದ್ಯಾರ್ಥಿನಿಯರ ಎರಡು ಗುಂಪು ಶಾಲೆಯ ಆವರಣದಲ್ಲಿ ಪರಸ್ಪರ ಸಂಘರ್ಷ ನಡೆಸಿದ್ದು, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಖಾಸಗಿ ಶಾಲೆಯ ಕೆಲವರು ವಿದ್ಯಾರ್ಥಿನಿಯರು ಹೊಡೆದಾಡಿಕೊಂಡಿದ್ದು, ಪರಸ್ಪರ ಕೂದಲನ್ನು ಎಳೆದಾಡಿಕೊಂಡು ಮತ್ತು ಹಿಂಸಾತ್ಮಕವಾಗಿ ತಳ್ಳಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಹೊಡೆಯಲು ಹಾಕಿ‌‌ ಸ್ಟಿಕ್ ಅಂತಹ ದೊಣ್ಣೆಗಳನ್ನು ಬಳಸಿರುವುದು ಕೂಡ ವಿಡಿಯೋದಲ್ಲಿ ಕಂಡುಬಂದಿದ್ದು, ಹಲವು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಈ ಸಂಘರ್ಷಕ್ಕೆ ನಿಖರ ಕಾರಣಗಳು ತಿಳಿದು ಬಂದಿಲ್ಲ.

ಇ‌ನ್ನು ಈ ಬಗ್ಗೆ ಶಾಲಾ ಆಡಳಿತ ಮಂಡಳಿಯೂ ಕೂಡ ಇನ್ನು ಹೇಳಿಕೆ ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ.

Comments are closed.