ಕರಾವಳಿ

ಮಂಗಳೂರಿನ ಖ್ಯಾತ ಕೊಂಕಣಿ ಸಾಹಿತಿ, ಹಾಸ್ಯ ಬರಹಗಾರ ‘ಸಿಜಿಎಸ್ ತಾಕೊಡೆ ‘ ನಿಧನ

Pinterest LinkedIn Tumblr

ಮಂಗಳೂರು: ಖ್ಯಾತ ಕೊಂಕಣಿ ಸಾಹಿತಿ, ಹಾಸ್ಯ ಸಾಹಿತ್ಯ ಬರಹಗಾರ ‘ಸಿಜಿಎಸ್ ತಾಕೊಡೆ’ ಎಂದೇ ಜನಪ್ರಿಯರಾಗಿದ್ದ ಸಿರಿಲ್ ಜಿ. ಸಿಕ್ವೇರಾ ( 71) ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದಾರೆ.

ದ.ಕ ಜಿಲ್ಲೆಯ ತಾಕೊಡೆನಲ್ಲಿ ಜನಿಸಿದ ಸಿರಿಲ್ ತಮ್ಮ ಆರಂಭಿಕ ಶಿಕ್ಷಣವನ್ನು ತಾಕೊಡೆ, ಮೂಡುಬಿದಿರೆ ಮತ್ತು ಬೆಂಗಳೂರಿನಲ್ಲಿ ಮಾಡಿದ್ದು 12 ನೇ ವಯಸ್ಸಿನಲ್ಲಿ ಕೊಂಕಣಿಯಲ್ಲಿ ಬರೆಯಲು ಪ್ರಾರಂಭಿಸಿದರು. ಅವರು ರಾಕ್ನೋ ವಾರಪತ್ರಿಕೆಯ ಉಪ ಸಂಪಾದಕರಾಗಿದ್ದರು. ನಂತರ ‘ಕಾಣಿಕ’ ಮತ್ತು ‘ಉಮಾಳೊ’ ಕೊಂಕಣಿ ನಿಯತಕಾಲಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದರು. ಸಿಜೆಎಸ್‌ ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರೆದಿದ್ದರೂ, ಅವರ ಹಾಸ್ಯಮಯ ಬರಹಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದರು.

ಸಿಜಿಎಸ್ಸ್‌ ಅವರಿಗೆ ಗೆ ಕೊಂಕಣಿ ಬಾಷಾ ಮಂಡಲ್, ಗೋವಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಸಂದೇಶ, ಡೈಜಿ ದುಬೈ ಮತ್ತು ಕೊಂಕಣಿ ಕುಟಮ್ ಬಹ್ರೇನ್ ಪ್ರಶಸ್ತಿಗಳು ಲಭಿಸಿದ್ದು ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ

ಸಿಜಿಎಸ್ ಅವರು ಪತ್ನಿ ಸಿಲ್ವಿಯಾ ಮತ್ತು ಮಕ್ಕಳಾದ ವಿಜೇಶ್ ಮತ್ತು ವಿಜೇತಾ ಮತ್ತು ಅಪಾರ ಬಂಧು ಬಳಗ, ಸ್ನೇಹಿತರನ್ನು ಅಗಲಿದ್ದಾರೆ.

Comments are closed.