ಕುಂದಾಪುರ: ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ ಅವರ ಸಾವಿಗೆ ನ್ಯಾಯ ಒದಗಿಸಲು ಹಾಗೂ ವಿಫಲ ಮತಾಂತರ ಪ್ರಯತ್ನದ ನಂತರ ಆತ್ಮಹತ್ಯೆಗೆ ಪ್ರಚೋದಿಸಿದ ಅಜೀಜ್ ದಂಪತಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ದೇವಾಡಿಗ ಸಮಾಜ ಸೇವಾ ಸಂಘ ಕುಂದಾಪುರದ ವತಿಯಿಂದ ಮೇ.30 ಸೋಮವಾರ 11 ಗಂಟೆಗೆ ಕುಂದಾಪುರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ.
ಕಪಟ ಪ್ರೀತಿಯ ಕ್ರೌರ್ಯಕ್ಕೆ ಬಲಿಯಾಗಿ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಶರಣಾದ ದೇವಾಡಿಗ ಸಮಾಜದ ಯುವತಿ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ ಅವರ ಸಾವಿಗೆ ನ್ಯಾಯ ಒದಗಿಸುವಂತೆ ಜಿಹಾದಿ ಕೃತ್ಯಕ್ಕೆ ಪ್ರಯತ್ನಿಸಿ, ವಿಫಲ ಮತಾಂತರ ಪ್ರಯತ್ನದ ನಂತರ ಆತ್ಮಹತ್ಯೆಗೆ ಪ್ರಚೋದಿಸಿದ ಅಜೀಜ್ ದಂಪತಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಮತ್ತು ಮೃತ ಶಿಲ್ಪಾ ದೇವಾಡಿಗ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಆರ್ಥಿಕ ಪರಿಹಾರ ಒದಗಿಸುವಂತೆ ಕೋರಿ ಕುಂದಾಪುರ ಎ.ಸಿ ಅವರಿಗೆ ಮನವಿ ಸಲ್ಲಿಸಲಿದ್ದು, ನಂತರ ಶಿಲ್ಪಾ ದೇವಾಡಿಗಳ ಉಪ್ಪಿನಕುದ್ರು ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಲಿದ್ದು ದೇವಾಡಿಗ ಸಮಾಜ ಸೇವಾ ಸಂಘ(ರಿ) ಕುಂದಾಪುರದ ಎಲ್ಲಾ ಪದಾಧಿಕಾರಿಗಳು ಮತ್ತು ಸಮಾಜದ ತಾಲ್ಲೂಕಿನ ಎಲ್ಲಾ ಸಹ ಸಂಘದ ಪದಾಧಿಕಾರಿಗಳು ಮತ್ತು ಸಮಸ್ತ ದೇವಾಡಿಗ ಸಮಾಜ ಬಾಂಧವರು ಉಪಸ್ಥಿತರಿರಬೇಕಾಗಿ ಪ್ರಕಟಣೆ ತಿಳಿಸಿದೆ.
Comments are closed.