ಕರಾವಳಿ

ಮಂಗಳೂರಿನ ಯುವಕನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಲು ನಿರ್ಧರಿಸಿದ ಕುಟುಂಬ

Pinterest LinkedIn Tumblr

ಮಂಗಳೂರು: ಇಲ್ಲಿನ ಬಿಕರ್ನಕಟ್ಟೆ ರಾ.ಹೆ 73 ನೇ ಡಾಮಾರು ರಸ್ತೆಯಲ್ಲಿ ಸವಾರನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಧೀರಜ್‌ (25) ಸೋಮವಾರ ರಾತ್ರಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದು, ಮೃತರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಶನಿವಾರ ತಡರಾತ್ರಿ ಗಣೇಶ್ ತನ್ನ ಸ್ನೇಹಿತ ಧೀರಜ್ ಅವರನ್ನು ಮನೆಗೆ ಬಿಟ್ಟು ಬರುವುದಾಗಿ ಬೈಕ್ ನಲ್ಲಿ ತೆರಳಿದ್ದ ವೇಳೆ, ವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ಗೆ ಢಿಕ್ಕಿ ಹೊಡೆದು ಸವಾರರು ಗಂಭೀರ ಗಾಯಗೊಂಡಿದ್ದರು.

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ರಾತ್ರಿ ಧೀರಜ್‌ ಅವರ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದರು. ಇವರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಇನ್ನು ಗಂಭೀರ ಗಾಯಗೊಂಡಿರುವ ಗಣೇಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments are closed.