ಉಡುಪಿ: ರಾಣೇಬೆನ್ನೂರು ತಾಲೂಕು ಮೆಡ್ಲೇರಿ ಗ್ರಾಮದ ನಿವಾಸಿ ಶಶಿಕಲಾ ದಿಳ್ಳೆಪ್ಪ ಬುಡ್ಡಳ್ಳರ (32)ಎಂಬ ಮಹಿಳೆ ತನ್ನ ಮಕ್ಕಳಾದ ಹರೀಶ ದಿಳ್ಳೆಪ್ಪ ಬುಡ್ಡಳ್ಳರ (09)ಹಾಗೂ ಯಶವಂತ ದಿಳ್ಳೆಪ್ಪ ಬುಡ್ಡಳ್ಳರ(04)ಎಂಬ ಮಕ್ಕಳೊಂದಿಗೆ ದಿನಾಂಕ 23-10-2021 ರಂದು ಮನೆಯಿಂದ ಹೋದವಳು ಕಾಣೆಯಾಗಿರುವುದಾಗಿ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕಾಣೆಯಾದ ಶಶಿಕಲಾ ದಿಳ್ಳೆಪ್ಪ ಬುಡ್ಡಳ್ಳರ ಐದು ಅಡಿ ಎತ್ತರ, ಗೋದಿಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು, ಕನ್ನಡ ಮಾತನಾಡುತ್ತಾಳೆ. ಬಲಕೆನ್ನೆಯ ಮೇಲೆ ಗೆಳತಿ ಕಲೆ ಇದೆ. ಹರೀಶ ದಿಳ್ಳೆಪ್ಪ ಬುಡ್ಡಳ್ಳರ ಹುಡುಗ 3.8 ಅಡಿ ಎತ್ತರ ಗೋದಿಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು, ಕನ್ನಡ ಮಾತನಾಡುತ್ತಾನೆ. ಯಶವಂತ ದಿಳ್ಳೆಪ್ಪ ಬುಡ್ಡಳ್ಳರ 3 ಅಡಿ ಎತ್ತರ, ಗೋದಿಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು, ಅಲ್ಪಸ್ವಲ್ಪ ಕನ್ನಡ ಮಾತನಾಡುತ್ತಾನೆ. ಬಲಗೈಮೇಲೆ ಹಳೆ ಗಾಯದ ಕಲೆ ಇದೆ.
ಈ ಮೇಲ್ಕಂಡ ಚರಹರೆಯ ಮಹಿಳೆ ಹಾಗೂ ಮಕ್ಕಳ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಹಾವೇರಿ ಕಂಟ್ರೋಲ್ ರೂಂ.08375-237368, ಆರಕ್ಷಕರ ಅಧೀಕ್ಷಕರ ದೂ.08375-232800, ರಾಣೇಬೆನ್ನೂರು ಉಪವಿಭಾಗ ಡಿಎಸ್.ಪಿ. ದೂ.08373-266344, ಮೊ.9480804521, ರಾಣೇಬೆನ್ನೂರು ಗ್ರಾಮೀಣ ಠಾಣೆ ದೂ.08373-266433, ಮೊ.94980804552 ಸಂಪರ್ಕಿಸಲು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.