ಕುಂದಾಪುರ: ಇತ್ತೀಚೆಗೆ ಮೃತರಾದ ಮಾಜಿ ತಾಲೂಕು ಪಂಚಾಯತ್ ಸದಸ್ಯ, ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಟಿ.ಕೆ. ಕೋಟ್ಯಾನ್ ಅವರಿಗೆ ತಲ್ಲೂರಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಾಸ್ತಾವಿಕವಾಗಿ ತಲ್ಲೂರು ಗ್ರಾ.ಪಂ ಮಾಜಿ ಅಧ್ಯಕ್ಷ ಆನಂದ ಬಿಲ್ಲವ ಟಿ.ಕೆ ಕೋಟ್ಯಾನ್ ಅವರ ಕಾಲೇಜು ದಿನಗಳನ್ನ ಮೆಲುಕು ಹಾಕಿದರು
ತಲ್ಲೂರು ಗ್ರಾ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯ ಉದಯ್ ಕುಮಾರ್ ತಲ್ಲೂರು ಮಾತನಾಡಿ, ಟಿ.ಕೆ ಕೋಟ್ಯಾ್ ಕ್ರೀಡಾ ಕ್ಷೇತ್ರದಲ್ಲಿ ಬಹಳಷ್ಟು ಆಸಕ್ತಿ ಹೊಂದಿ ಸಾಧನೆ ಮಾಡಿದ್ದು ಅವರಿಗೆ ಸಿಕ್ಕ ಗೌರವ ತಲ್ಲೂರಿನಲ್ಲಿ ಶಾಶ್ವತವಾಗಿ ಉಳಿಯ ಬೇಕಾದರೆ ಅವರ ಹೆಸರಿನ ಸರ್ಕಲ್, ಅಥವ ಆಟದ ಮೈದಾನಕ್ಕೆ ಅವರ ಹೆಸರು ಇಡಬೇಕು ಎಂದು ಹಳೆಯ ನೆನಪುಗಳನ್ನ ಹಂಚಿಕೊಂಡರು.
ಹಿರಿಯ ವಕೀಲ ಟಿ.ಬಿ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ನಾಯಕ್, ಸದಸ್ಯ ಚಂದ್ರ ದೇವಾಡಿಗ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕರಣ ಪೂಜಾರಿ, ಸಮುದಾಯದ ಹಿರಿಯ ಸದಸ್ಯ ಸುರೇಶ್ ಕಡಮಾರ್ ಮಾತನಾಡಿದರು.
ಸಮುದಾಯದ ಹಿರಿಯ ಸದಸ್ಯ ದೇವರಾಜ್ ಕಾರ್ಯಕ್ರಮದಲ್ಲಿ ವಂದಿಸಿದರು.
Comments are closed.