ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು, ಮುಂಬೈನ ತಮ್ಮ ಅಧಿಕೃತ ನಿವಾಸವನ್ನು ತೊರೆದು ಸ್ವಂತ ನಿವಾಸಕ್ಕೆ ಕುಟುಂಬ ಸಮೇತ ಮರಳಿದ್ದಾರೆ.
ಏಕನಾಥ್ ಶಿಂಧೆ ಬಂಡಾಯದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಿಎಂ ಗೃಹ ಕಚೇರಿ ‘ವರ್ಷಾ’ದಿಂದ ಸ್ವಂತ ನಿವಾಸ ‘ಮಾತೋಶ್ರೀ’ಗೆ ಮರಳಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಉದ್ಧವ್ ಠಾಕ್ರೆ ರಾಜಿನಾಮೆ ವಿಚಾರ ವ್ಯಾಪಕವಾಗುತ್ತಿದ್ದಂತೆಯೇ ಈ ಕುರಿತು ಸಂಜಯ್ ರಾವತ್ ಸ್ಪಷ್ಟನೆ ನೀಡಿದ್ದು, ಉದ್ಧವ್ ಠಾಕ್ರೆ ಅವರು ಅಧಿಕೃತ ನಿವಾಸವನ್ನು ತೊರೆದಿದ್ದಾರೆಯೇ ಹೊರತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ. ಮುಖ್ಯಮಂತ್ರಿಯಾಗಿ ಠಾಕ್ರೆ ಮುಂದುವರಿಯಲಿದ್ದಾರೆ ಎಂದು ಹೇಳಿದರು.
ಶಿವಸೇನಾ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರಕ್ಕಿರುವ ಬಹುಮತವನ್ನು ಸಿಎಂ ಉದ್ಧವ್ ಠಾಕ್ರೆ ಸಾಬೀತುಪಡಿಸಲಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸಂಜತ್ ರಾವತ್ ಸ್ಪಷ್ಟನೆ ನೀಡಿದರು.
Comments are closed.