ಉಡುಪಿ: ಜಿಲ್ಲೆಯ ಹೆಬ್ರಿ ಸಮೀಪದ ಕಬ್ಬಿನಾಲೆ ಗ್ರಾಮದ ಬಲ್ಚಾರ ಮನೆ ಎನ್ನುವಲ್ಲಿ ದಯಾಕರ್ ಗೌಡ ಅವರ ಮನೆಯ ದನದ ಕೊಟ್ಟಿಗೆಗೆ ನುಗ್ಗಿದ ಕಳ್ಳರು ಮನೆಯವರಿಗೆ ಕತ್ತಿ ತೋರಿಸಿ ದನಗಳನ್ನು ಕಳ್ಳತನ ಮಾಡಿದ ಆತಂಕಕಾರಿ ಘಟನೆ ನಡೆದಿದೆ.
ಮನೆಯವರಾದ ದಯಾಕರ್ ಹಾಗೂ ಪ್ರಸಾದ್ ಅವರು ಮುಂಜಾನೆ ವೇಳೆಗೆ ಕೊಟ್ಟಿಗೆ ಹತ್ತಿರದಲ್ಲಿ ಕಾರೊಂದು ನಿಂತಿರುವುದನ್ನು ಗಮನಿಸಿ ದನದ ಕೊಟ್ಟಿಗೆ ಬಂದು ನೋಡುವಾಗ ಅಪರಿಚಿತ ವ್ಯಕ್ತಿಗಳು 2 ದನಗಳನ್ನು ಎಳೆದೊಯ್ಯುತ್ತಿದ್ದರು. ಬಿಡಿಸಿಕೊಳ್ಳಲು ಅವರ ಸಮೀಪ ಹೋಗುತ್ತಿರುವಾಗ ನೀವು ಮುಂದೆ ಬಂದರೆ ನಿಮಗೆ ಕತ್ತಿಯಿಂದ ಕಡಿದು ಕೊಲ್ಲುವುದಾಗಿ ಕತ್ತಿಯನ್ನು ತೋರಿಸಿ ಬೆದರಿಸಿದ್ದರು. ದನದ ಕೊಟ್ಟಿಗೆಯನ್ನು ಕಿತ್ತು ಹಾಕಿ ಸುಮಾರು 30 ಸಾವಿರ ರೂ. ಮೌಲ್ಯದ ಎರಡು ದನಗಳನ್ನು ಕದ್ದು ಪರಾರಿಯಾಗಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.