ಸುಳ್ಯ/ ಮಡಿಕೇರಿ: ದಕ್ಷಿಣ ಕನ್ನಡದ ಸುಳ್ಯ ತಾಲೂಕು, ಕೊಡಗು ಜಿಲ್ಲೆಯ ಕೆಲವೆಡೆ ಶನಿವಾರ ಬೆಳಿಗ್ಗೆ ಭೂಕಂಪನ ಅನುಭವವಾಗಿದ್ದು, ಸ್ಥಳೀಯರಲ್ಲಿ ಮತ್ತೆ ಆತಂಕ ಹುಟ್ಟಿಸಿದೆ.
ಬೆಳಗ್ಗೆ ಸುಮಾರು 9.10ಕ್ಕೆ ಭೂಕಂಪನದ ಅನುಭವವಾಗಿದ್ದು, ಸುಮಾರು 45 ಸೆಕೆಂಡುಗಳ ಕಾಲ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಇದರಿಂದಾಗಿ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿವೆ. ಕೆಲವೆಡೆ ಗೋಡೆ ಸಣ್ಣದಾಗಿ ಬಿರುಕುಬಿಟ್ಟಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭೂಕಂಪನದ ಪರಿಣಾಮ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಪಿ. ಕೆ. ಅಬೂಸಾಲಿ ಅವರ ಮನೆ ಗೋಡೆಗಳು ಬಿರುಕು ಬಿಟ್ಟಿವೆ ಎನ್ನಲಾಗಿದೆ.
ಮಡಿಕೇರಿ ತಾಲೂಕು ಹಾಗೂ ಕೊಡಗು ಗಡಿಗೆ ಹೊಂದಿಕೊಂಡಿರುವ ದ.ಕ ಜಿಲ್ಲೆಯ ಸುಳ್ಯ , ಮರ್ಕಂಜ, ಪೆರಾಜೆ, ಗೂನಡ್ಕ , ಕಲ್ಲುಗುಂಡಿ, ಅರಂತೋಡು, ತೊಡಿಕಾನ, ಐವರ್ನಾಡು, ಸಂಪಾಜೆ ಭಾಗದಲ್ಲೂ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ.
Comments are closed.