ಕರಾವಳಿ

ಕುಂಭಾಸಿ‌ ಮಕ್ಕಳ ಮನೆ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೂರಕ ಪರೀಕ್ಷೆಯ ವಿಶೇಷ ತರಬೇತಿ ಶಿಬಿರ ಸಮಾರೋಪ

Pinterest LinkedIn Tumblr

ಕುಂದಾಪುರ: ವಿದ್ಯಾರ್ಥಿಗಳು‌ ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡು ಕನಸನ್ನು ಕಾಣಬೇಕು. ಆ ಕನಸು ನನಸಾಗಿಸಿಕೊಂಡು ಜೀವನದಲ್ಲಿ ಯಶಸ್ಸು‌ ಕಾಣಲು ಪ್ರಯತ್ನಿಸಿದಾಗ ಉತ್ತಮವಾದ ಅಂಕವನ್ನು ಪಡೆದು ಶೈಕ್ಷಣಿಕವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಡಯಟ್ ಉಪನ್ಯಾಸಕ ಚಂದ್ರ ನಾಯ್ಕ್ ಹೇಳಿದರು.

ಐಟಿಡಿಪಿ ಉಡುಪಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಕ್ಕಳ ಮನೆ ಕುಂಭಾಶಿ ಜಂಟಿ ಆಶ್ರಯದಲ್ಲಿ ಪೂರಕ ಪರೀಕ್ಷೆ ಬರೆಯುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸತತ ಪರಿಶ್ರಮ, ಏಕಾಗ್ರತೆ, ಮನೋಸ್ಥೈರ್ಯ‌ ಬೆಳೆಸಿಕೊಳ್ಳುವ ಜೊತೆಗೆ ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಕೊರಗ‌ ಸಮುದಾಯದ ಮುಖಂಡರಾದ ಗಣೇಶ್ ಕುಂದಾಪುರ, ಗಣೇಶ್ ಬಾರ್ಕೂರು ಉಪಸ್ಥಿತರಿದ್ದರು.

ಮಕ್ಕಳ‌ ಮನೆಯ ವಿನಿತಾ ಕಾರ್ಯಕ್ರಮ ನಿರೂಪಿಸಿ, ನಿರಂಜಿನಿ ಸ್ವಾಗತಿಸಿ, ಸುದರ್ಶನ್ ವಂದಿಸಿದರು.

Comments are closed.