ಉಡುಪಿ: ಮಲ್ಪೆಯಲ್ಲಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ಲೈಫ್‌ಗಾರ್ಡ್ ತಂಡ ರಕ್ಷಿಸಿದ ಘಟನೆ ಜೂ.27ರ ಭಾನುವಾರ ಸಂಜೆ ನಡೆದಿದೆ.
ಪುಣೆ ಮೂಲದ 45 ವರ್ಷದ ಮಹಿಳೆಯೊಬ್ಬರು ಮಗನೊಂದಿಗೆ ಮಲ್ಪೆ ಬೀಚ್‌ಗೆ ಬಂದಿದ್ದು, ಅಲ್ಲಿ ಆತ್ಮಹತ್ಯೆ ಮಾಡುವ ಉದ್ದೇಶದಿಂದ ಆ ಮಹಿಳೆ ಸಮುದ್ರದ ನೀರಿನತ್ತ ಓಡುತ್ತಿದ್ದರೆನ್ನಲಾಗಿದೆ.
ಇದನ್ನು ಸ್ಥಳದಲ್ಲಿದ್ದ ಜೀವರಕ್ಷಕ ದಳದವರು ಗಮನಿಸಿದ್ದು, ತಕ್ಷಣವೇ ಆ ಮಹಿಳೆಯನ್ನು ರಕ್ಷಿಸಿ ತೀರಕ್ಕೆ ಕರೆತಂದರು. ಆದರೆ ಮತ್ತೆ ಅದೇ ಪ್ರಯತ್ನ ಮುಂದುವರಿಸಿದಾಗ ಜೀವರಕ್ಷಕ ತಂಡದವರು ಮಗನನ್ನು ಮತ್ತು ಮಹಿಳೆಯನ್ನು ಮಲ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆತ್ನಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ.
Comments are closed.