ಕುಂದಾಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಂಕರನಾರಾಯಣ ಗ್ರಾಮದ ಕುಳ್ಳಂಜೆಯಲ್ಲಿ ನಡೆದಿದೆ.
ಶಂಕರನಾರಾಯಣ ಸರಕಾರಿ ಕಾಲೇಜು ನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಮಾನಸ ಕುಲಾಲ್ (17) ಆತ್ಮಹತ್ಯೆಗೆ ಶರಣಾದ ಯುವತಿ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಬಳಿಕ ಮಾನಸ ಮರು ಪರೀಕ್ಷೆ ಬರೆದಿದ್ದಳು ಆದರೆ ಮರು ಪರೀಕ್ಷೆಯಲ್ಲೂ ಅನುತ್ತೀರ್ಣಗೊಂಡಿದ್ದು ಇದರಿಂದ ಮನನೊಂದ ವಿದ್ಯಾರ್ಥಿನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶಂಕರನಾರಾಯಣ ಗ್ರಾಮದ ಕುಳ್ಳಂಜೆ ಶಾಲೆ ಬಳಿಯ ನಿವಾಸಿ ಬಾಬ್ಬಣ್ಣ ಕುಲಾಲ ಅವರಿಗೆ ಇಬ್ಬರು ಮಕ್ಕಳಿದ್ದು ಒಬ್ಬ ಪುತ್ರ ಕೆಲವು ವರ್ಷದ ಹಿಂದೆ ಬ್ರೈನ್ ಟ್ಯೂಮ್ಮರ್ ನಿಂದ ಮೃತ ಪಟ್ಟಿದ್ದಾನೆ. ಬಾಬಣ್ಣ ಕುಲಾಲ ಅವರಿಗೆ ಅಪಘಾತವಾಗಿ ದುಡಿಯಲು ಕೂಡ ಆಗುತ್ತಿರಲಿಲ್ಲ. ತಾಯಿ ಅಕ್ಷರ ದಾಸೋಹ ಕೆಲಸ ಮಾಡಿ ಸಂಸಾರ ನಡೆಸುತಿದ್ದರು. ಮಾನಸ ಅವರ ವಿದ್ಯಾಭ್ಯಾಸಕ್ಕೆ ಒಬ್ಬರು ದಾನಿಗಳು ಸಹಾಯ ಮಾಡುತಿದ್ದರು.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.