ಕರಾವಳಿ

ಮಂಗಳೂರು- ದೆಹಲಿ ನೇರ ವಿಮಾನ ಯಾನ ಕೊನೆಗೂ ಆರಂಭ

Pinterest LinkedIn Tumblr

ಮಂಗಳೂರು: ಕರಾವಳಿಯ ಬಹುಕಾಲದ ಬೇಡಿಕೆಯಾಗಿದ್ದ ಮಂಗಳೂರು-ದೆಹಲಿ ನೇರ ವಿಮಾನ ಯಾನ ಕೊನೆಗೂ ಪುನರಾರಂಭಗೊಂಡಿದೆ.

ಇಂಡಿಗೋ ಏರ್ ವೇಸ್ ನ ವಿಮಾನವು ಜು.1ರಿಂದ ಮಂಗಳೂರು-ದಿಲ್ಲಿ ನಡುವೆ ವಿಮಾನಯಾನ ಆರಂಭಿಸಿದೆ. 6ಇ 2164 ವಿಮಾನದಲ್ಲಿ 77 ಪ್ರಯಾಣಿಕರು ದಿಲ್ಲಿಯಿಂದ ಮಂಗಳೂರು ತಲುಪಿದ್ದರೆ, 6ಇ 2165 ವಿಮಾನದಲ್ಲಿ 140 ಪ್ರಯಾಣಿಕರು ಮಂಗಳೂರಿನಿಂದ ದಿಲ್ಲಿಗೆ ಪ್ರಯಾಣಿಸಿದರು.

ಕ್ಯಾಪ್ಟನ್‌ ಅನುಭವ್‌ ಬ್ಯಾನರ್ಜಿ ಈ ವಿಮಾನ ಸಂಚಾರದ ನೇತೃತ್ವ ವಹಿಸಿದ್ದರು. 6ಇ 2164 ಮತ್ತು 6ಇ 2165 ವಿಮಾನಗಳು ಭಾನುವಾರ, ಸೋಮವಾರ, ಬುಧವಾರ ಮತ್ತು ಸಂಚರಿಸಲಿವೆ.

6ಇ 2164 ವಿಮಾನ ದಿಲ್ಲಿಯಿಂದ ಬೆಳಗ್ಗೆ 7.40ಕ್ಕೆ ಹೊರಟು 10.45ಕ್ಕೆ ಮಂಗಳೂರು ತಲುಪಲಿದೆ. 6ಇ 2165 ವಿಮಾನವು ಮಂಗಳೂರಿನಿಂದ ಬೆಳಗ್ಗೆ 10.45ಕ್ಕೆ ಹೊರಟು 1.20ಕ್ಕೆ ದಿಲ್ಲಿಗೆ ತಲುಪಲಿದೆ.

ಈ ನೇರ ವಿಮಾನ ಯಾನವು ಚಂಡೀಗಢ, ಡೆಹ್ರಾಡೂನ್‌, ಪಾಟ್ನಾ, ರಾಂಚಿ, ಲಕ್ನೋ, ಭೋಪಾಲ್‌, ದಮಾಮ್‌, ಜೆದ್ದಾ ಮತ್ತು ರಿಯಾದ್‌ನಂತಹ ಸ್ಥಳಗಳಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಸಂಪರ್ಕವನ್ನು ಸಾಧಿಸಲು ಸುಗಮವಾಗಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

Comments are closed.