ಕರಾವಳಿ

ಮರವಂತೆಯಲ್ಲಿ ಮುಂದುವರಿದ ಕಡಲ್ಕೊರೆತ: ಜನಪ್ರತಿನಿಧಿಗಳ ಗೈರು, ಅಧಿಕಾರಿಗಳ ನಿರ್ಲಕ್ಷ್ಯ, ಜನರಿಂದಲೇ ಕಾಮಗಾರಿ..!

Pinterest LinkedIn Tumblr

ಕುಂದಾಪುರ: ಮರವಂತೆಯಲ್ಲಿ ಮತ್ತೆ ಕಡಲು ಕೊರೆತ ಉಂಟಾಗಿದ್ದು ತೆಂಗಿನ ಮರಗಳು ಹಾಗೂ ಮೀನುಗಾರಿಕೆ ಸಲಕರಣೆಗಳ ಶೇಡ್ ಗಳು ನೀರು ಪಾಲಾಗಿದ್ದು, ಹಾಕಿದ ಕಲ್ಲು ಸಂಪೂರ್ಣ ಸಮುದ್ರ ಪಾಲಾಗಿದೆ.

ಈಗಾಗಲೇ ಅಧಿಕಾರಿಗಳು ಬಂದುಹೋದರು ಏನು ಕೂಡ ಪ್ರಯೊಜನೆ ಆಗಲಿಲ್ಲ, ಸಮುದ್ರದ ಅಬ್ಬರದ ಅಲೆಗಳು ಜಾಸ್ತಿ ಆಗಿರುದರಿಂದ ಕಡಲು ತೀರ ಪ್ರದೇಶದಲ್ಲಿ ಅಪಾಯದ ಪರಿಸ್ಥಿತಿ ಉಂಟಾಗಿದ್ದು ಜನರಗೋಳನ್ನು ಕೇಳುವರು ಯಾರು ಇಲ್ಲದಂತಾಗಿದೆ.

ಕಡಲ್ಕೊರತೆ ಹೀಗೆ ಮುಂದುವರಿದರೇ ನೂರಾರು ಮೀನುಗಾರರ ಮನೆಗಳಿಗೆ ಹಾನಿ ಆಗುವ ಮತ್ತು ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ. ಈಗ ಮತ್ತೆ ಕಡಲ್ಕೊರೆತ ಉಂಟಾಗಿದ್ದು ಜನರು ಮನೆಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಇದೆ ಶಾಸಕರು ಹಾಗೂ ಸಂಸದರು ಇತ್ತಕಡೆ ಗಮನಹರಿಸಿಬೇಕಾಗಿ ಗ್ರಾಮಸ್ಥರ ಮನವಿ ಮಾಡಿಕೊಂಡರು.

ಸ್ಥಳೀಯರು ತಾವಿರುವ ಪ್ರದೇಶವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಸಮುದ್ರದ ಅಬ್ಬರ ಜಾಸ್ತಿಯಾಗಿದ್ದು, ಸ್ಥಳೀಯರು, ಮೀನುಗಾರರ ಒಂದಾಗಿ, ಮೀನುಗಾರರ ಸೇವಾ ಸಮಿತಿಯಿಂದ ಮಣ್ಣನ್ನು ಚೀಲಕ್ಕೆ ತುಂಬಿ ತಾತ್ಕಾಲಿಕ ತಡೆಗೋಡೆ ನಿರ್ಮಿಸುತ್ತಿದ್ದಾರೆ.

ಸೇವಾ ಸಮಿತಿ ಅಧ್ಯಕ್ಷರಾದ ವಾಸುದೇವ, ಚಂದ್ರ ಖಾರ್ವಿ, ಸುದರ್ಶನ್, ಸತೀಶ್ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Comments are closed.