ಕರಾವಳಿ

ಹಿರಿಯ ಚಿಂತಕ, ಹೋರಾಟಗಾರ ಜಿ. ರಾಜಶೇಖರ್ ನಿಧ‌ನ

Pinterest LinkedIn Tumblr

ಉಡುಪಿ: ಚಿಂತಕ, ವಿಮರ್ಶಕ, ಹೋರಾಟಗಾರ ಜಿ.ರಾಜಶೇಖರ್(75) ಅವರು ಜು.20 ಬುಧವಾರ ನಿಧನರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜಶೇಖರ್ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಕಳೆದ ಎರಡು ವರ್ಷಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ರಾಜಶೇಖರ್ ಅವರನ್ನ ಇತ್ತೀಚಿಗೆ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಿ.ರಾಜಶೇಖರ್ ನಿಧನರಾಗಿದ್ದಾರೆ. ಜಿ.ರಾಜಶೇಖರ್ ಅಂತ್ಯಕ್ರಿಯೆ ಇಂದು(ಗುರುವಾರ) ನಡೆಯಲಿದೆ. ರಾಜಶೇಖರ ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಜಿ. ರಾಜಶೇಖರ ಅವರು 1946ರಲ್ಲಿ ಜನಿಸಿದರು. ಉಡುಪಿಯಲ್ಲಿ ಪದವಿವರೆಗಿನ ವಿದ್ಯಾಭ್ಯಾಸ ನಡೆಸಿ ಕೆಲಕಾಲ ಶಿಕ್ಷಕರಾಗಿ ಕೆಲಸಮಾಡಿ ಎಲ್ಐಸಿಯಲ್ಲಿ ಉದ್ಯೋಗ ಪಡೆದರು. ಜಿ. ರಾಜಶೇಖರ ಅವರು ಸಾಹಿತ್ಯ-ಸಮಾಜ-ರಾಜಕಾರಣ ಹಾಗೂ ಕೋಮುವಾದವೂ ಸೇರಿದಂತೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆ ನಿರಂತರವಾಗಿ ಬರೆಯತ್ತ ಬಂದಿದ್ದಾರೆ.

ಕಾಗೋಡು ಸತ್ಯಾಗ್ರಹ, ಪರಿಸರ ಮತ್ತು ಸಮಾಜವಾದ, ಬರ್ಟೊಲ್ಟ್ ಬ್ರೆಕ್ಟ್ ಪರಿಚಯ, ದಾರು ಪ್ರತಿಮ ನ ಪೂಜಿವೇ (ಅನುವಾದ), ಕೋಮುವಾದದ ಕರಾಳ ಮುಖಗಳು, ಹರ್ಷಮಂದರ್ ಬರಹಗಳು (ಸಹಲೇಖಕ: ಕೆ. ಫಣಿರಾಜ್), ಬಹುವಚನ ಭಾರತ ಮಂತಾದವು ಇವರ ಪ್ರಕಟಿತ ಕೃತಿಗಳು.

 

Comments are closed.