ಕರ್ನಾಟಕ

‘ಮಗಳು ಜಾನಕಿ’ ಖ್ಯಾತಿಯ ನಟ ಯಲಹಂಕ ಬಾಲಾಜಿ ನಿಧನ

Pinterest LinkedIn Tumblr

ಬೆಂಗಳೂರು: ಮಾಯಾಮೃಗ, ಮಗಳು ಜಾನಕಿ ಖ್ಯಾತಿಯ ನಟ ಯಲಹಂಕ ಬಾಲಾಜಿ ಅಲ್ಪ ಕಾಲದ ಅನಾರೋಗ್ಯದಿಂದ ಕೊನೆಯುಸಿರೆಳಿದ್ದಾರೆ. ಯಲಹಂಕ ಬಾಲಾಜಿ ನಿಧನಕ್ಕೆ ನಿರ್ದೇಶಕ ಟಿ.ಎನ್‌.ಸೀತಾರಾಮ್ ಫೇಸ್‌ಬುಕ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ಟಿ.ಎನ್‌.ಸೀತಾರಾಮ್ ಬರೆದುಕೊಂಡಿದ್ದು..
“ನನ್ನ ಆತ್ಮೀಯ ಗೆಳೆಯ ಯಲಹಂಕ ಬಾಲಾಜಿ ಅಲ್ಪ ಕಾಲದ ಅನಾರೋಗ್ಯದ ನಂತರ ನಿಧನ ಹೊಂದಿದ್ದಾರೆ.ನನ್ನ ಎಲ್ಲಾ ಧಾರಾವಾಹಿಗಳಲ್ಲೂ ನಟಿಸಿದ್ದರು. ಮಾಯಾಮೃಗದಿಂದ , ಮಗಳು ಜಾನಕಿಯವರೆಗೆ. ಅತ್ಯಂತ ಹೃದಯವಂತ ಗೆಳೆಯ.ಎಲ್ಲ ಕಷ್ಟ ಗಳಲ್ಲೂ, ಸಂತೋಷಗಳಲ್ಲೂ ಜತೆಗೆ ಇರುತ್ತಿದ್ದ ಮನುಷ್ಯ.ಇಡೀ ಬದುಕಿನುದ್ದಕ್ಕೂ ಕಷ್ಟ ಕಂಡಿದ್ದರೂ ನಗುತ್ತಾ ಬದುಕಿದ ಗೆಳೆಯ.. ಬಾಲಾಜಿ ಇನ್ನಿಲ್ಲ ಎಂದು ನೆನೆಸಿಕೊಂಡರೆ ಅಪಾರಸಂಕಟವಾಗುತ್ತದೆ ತೀವ್ರ ನೋವಿನ ವಿದಾಯ ಬಾಲಾಜಿ” ಎಂದು ಟಿ.ಎನ್‌.ಸೀತಾರಾಮ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Comments are closed.