ಕರಾವಳಿ

ಬೆಳ್ತಂಗಡಿ: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಯುವಕರಿಂದ ವ್ಯಕ್ತಿಗೆ ಹಲ್ಲೆ, ತಡೆಯಲು ಬಂದ ಮತ್ತೋರ್ವ ಸಾವು

Pinterest LinkedIn Tumblr

ಬೆಳ್ತಂಗಡಿ: ಆರು ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದ್ದು ಈ ಸಂದರ್ಭ ಜಗಳ ತಡೆಯಲು ಬಂದ ವ್ಯಕ್ತಿಗೆ ಹಲ್ಲೆ ನಡೆದಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟ ಘಟನೆ ಜು.22 ರಂದು ಶುಕ್ರವಾರ ರಾತ್ರಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದ ನಿವಾಸಿ , ಜಗಳ ತಡೆಯಲು ಹೋದ ಜಾರಪ್ಪ ನಾಯ್ಕ್ (55) ಮೃತಪಟ್ಟವರು.

ಸ್ಥಳೀಯ ಆರು ವರ್ಷದ ಬಾಲಕಿಗೆ ಆರೋಪಿತ ನಾರಾಯಣ ನಾಯ್ಕ್ (47) ಎಂಬವರು ಹತ್ತು ದಿನಗಳ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಆತನಿಗೆ ಎಚ್ಚರಿಕೆ ನೀಡಲಾಗಿತ್ತು.

ಆದರೆ ಶುಕ್ರವಾರ ಸಂಜೆ ವೇಳೆ ನಾರಾಯಣ ನಾಯ್ಕ್ ಮತ್ತೆ ಬಾಲಕಿಯನ್ನು ಕರೆದು ಮಾತಾಡಿಸಿದ್ದನ್ನು ಯಾರೋ ನೋಡಿದ ಹಿನ್ನೆಲೆ ಅವರನ್ನು ಯುವಕರ ತಂಡ ತಡೆದು ಹಲ್ಲೆಗೆ ಮುಂದಾಗಿದೆ. ಇದನ್ನು ನೋಡಿದ ಜಾರಪ್ಪ ನಾಯ್ಕ್ ಹಲ್ಲೆ ತಪ್ಪಿಸಲು ಬಂದಾಗ ಅವರನ್ನು ಯುವಕರು ತಳ್ಳಿದ್ದಾರೆ. ಕೆಳಗೆ ಬಿದ್ದ ಜಾರಪ್ಪ ನಾಯ್ಕ್ ಮತ್ತು ಗಂಭೀರ ಹಲ್ಲೆ ಗೊಳಗಾದ ನಾರಾಯಣ ನಾಯ್ಕ್ ಅವರನ್ನು ಜಾರಪ್ಪ ಅವರ ಮಗ ರಾಜಶೇಖರ್ ಬಂದು ವಾಹನದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಈ ವೇಳೆ ಜಾರಪ್ಪ ನಾಯ್ಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಂತರ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ನಾರಾಯಣ ನಾಯ್ಕ್ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಜಾರಪ್ಪ ನಾಯ್ಕ್ ಅವರ ಪುತ್ರ ರಾಜಶೇಖರ್ ದೂರು ನೀಡಿದ್ದು, ಪ್ರಕರಣದ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.